ಪತ್ನಿಯ ಸಾವಿನ ಸುದ್ದಿ ಕೇಳುತ್ತಲೇ ಕಾರಿನ ಸಮೇತ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತಿ...

Suicide 30 Jan 20
Published on

ಬೆಳಗಾವಿ: ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಕೇಳುತ್ತಲೇ ಪತಿಯೂ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ್​ ತಾಲೂಕಿನ ಕೊಳವಿ ಬಳಿ ನಡೆದಿದೆ.

ಲಕ್ಷ್ಮಣ್ ಹನುಮಂತಪ್ಪ ದ್ಯಾಮಣ್ಣವರ್ (27) ಮೃತ. ಲಕ್ಷ್ಮಣ್ ಅವರ ಪತ್ನಿ ನಿನ್ನೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸುದ್ದಿ ಕೇಳುತ್ತಲೇ ಲಕ್ಷ್ಮಣ್​ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನ ಸಮೇತ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆಯಿಂದಲೂ ಪೊಲೀಸರು ಲಕ್ಷ್ಮಣ್​ಗಾಗಿ ಹುಡುಕುತ್ತಿದ್ದರು. ಸಂಜೆ ಅಗ್ನಿಶಾಮಕದಳದವರು ಲಕ್ಷ್ಮಣ್​ ಮೃತದೇಹ ಮತ್ತು ಕಾರನ್ನು ಕಾಲುವೆಯಿಂದ ಎತ್ತಿದ್ದಾರೆ. ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net