

ಲಕ್ಷ್ಮೇಶ್ವರ: ಪಟ್ಟಣದ ಎಸ್‌ಎಸ್‌ಕೆ ಸಮಾಜದವರು ಪ್ರತಿವರ್ಷ ಶ್ರದ್ಧೆ, ಭಕ್ತಿ, ಸಂಪ್ರದಾಯಬದ್ಧವಾಗಿ ಪರಿಸರಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಿದ್ದು, ಶುಕ್ರವಾರ ಅದ್ದೂರಿಯಾಗಿ ವಿಸರ್ಜನಾ ಮೆರವಣಿಗೆ ಜರುಗಿತು. ಮಹಿಳೆಯರು, ಮಕ್ಕಳು ಭಜನೆ, ಪ್ರಾರ್ಥನೆ, ಸಾಮೂಹಿಕ ನೃತ್ಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಭಾವಸಾರ ಕ್ಷತ್ರಿಯ ಸಮಾಜದವರು ಭಾಗಹಿಸಿದ್ದರು. ಗದಗ ಸುಡಗಾಡು ಸಿದ್ಧರ ನಗರದ 50 ಹುಡುಗರ ತಂಡ ವಾರಕರಿ ಸಂಪ್ರದಾಯ ಪ್ರಕಾರ ತಾಳ ಮೃದಂಗ ಮೂಲಕ ಭಜನೆ ಮೆರವಣಿಗೆ ಆಕರ್ಷಕಗೊಳಿಸಿದರು. ವಿಷ್ಣು- ಹರಿನಾಮ ನಾಮಸ್ಮರಣೆ, ಗಣನಾಯಕನ ಜಯಘೋಷಗಳು ಮೊಳಗಿದವು. ದಾರಿಯುದ್ದಕ್ಕೂ ನೂರಾರು ಜನರು ಸೇರಿ ಮಕ್ಕಳ ಭಜನೆ ಮತ್ತು ತಾಳವಾದ್ಯಕ್ಕೆ ಹೆಜ್ಜೆ ಹಾಕಿದರು. ಮೆರವಣಿಗೆ ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಪ್ರಾರಂಭವಾಗಿ ಶಿಗ್ಲಿ ನಾಕಾವರೆಗೂ ಸಾಗಿ, ನಂತರ ಶ್ರದ್ಧಾ ಭಕ್ತಿ ಪೂರ್ವಕವಾಗಿ ಗಣಪತಿಯ ಮಂಗಳಾರತಿ ಮಾಡಿ ವಿಸರ್ಜನೆ ಮಾಡಿದರು. ರಂಗನಾಥ ಬದಿ, ಹಭಪ ನಾರಾಯಣ ಬಿಸೆ, ಯಲ್ಲೂಸಾ ಬದಿ, ಪಾಂಡುಸಾ ಬದಿ, ವಿ.ಎಸ್. ಸಿದ್ಲಿಂಗ, ಭರತ ಬಾಕಳೆ, ಪರಶುರಾಮ ಮೆಹರವಾಡೆ, ಮನೋಹರಸಾ ಬಸವಾ, ರವಿ ಬದಿ, ಕಿರಣ ನವಲೆ, ವೆಂಕಟೇಶ ಮಾತಾಡೆ, ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಾಬಾಯಿ ಪವಾರ, ಸರೋಜಬಾಯಿ ಬದಿ, ವಾಸು ಬೋಮಲೆ, ಪ್ರಭು ಬೋಮಲೆ, ಅರುಣ ನವಲೆ ಪಾಲ್ಗೊಂಡರು.