

ಉಡುಪಿ: ಇಂದು ವಿಶ್ವಾದ್ಯಂತ ಯೋಗ ದಿನ ಆಚರಿಸಲಾಗಿದೆ. ಈ ದಿನದ ಪ್ರಯುಕ್ತ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಹಸ್ತನಡಿಗೆ ಮೂಲಕ ವಿದ್ಯಾರ್ಥಿಗಳನ್ನು ಬೆರಗುಗೊಳಿಸಿದ್ದಾರೆ.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳು ಶೀರ್ಷಾಶನ ಜತೆಗೆ ಎರಡೂ ಕೈಯನ್ನು ನೆಲಕ್ಕೆ ಒತ್ತಿಕೊಂಡು 10 ಮೀಟರ್ ದೂರ ಕ್ರಮಿಸಿ ಯೋಗ ಕೌಶಲ ಪ್ರದರ್ಶಿಸಿದರು. ಶ್ರೀಗಳಿಗೆ ಅಧ್ಯಾತ್ಮ, ಸಾಮಾಜಿಕ ಸಾಧನೆ ಜತೆಗೆ ದೇಹದಾರ್ಢ್ಯ ಪಟುತ್ವವೂ ಸಿದ್ಧಿಸಿದ್ದು, ಕರಾಟೆಯಲ್ಲಿ ವೈಯಕ್ತಿಕ ಸಾಧನೆ ಮಾಡಿದ್ದಾರೆ. ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಇರಲು ಸಾಧ್ಯ ಎಂಬ ಆಚಾರ್ಯ ಮಧ್ವರ ಮಾತಿಗೆ ಶ್ರೀಗಳು ಬಹುಮನ್ನಣೆ ನೀಡುತ್ತಿದ್ದಾರೆ.