

ಮದ್ದೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ಮಾಡುವಂತಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ನಡೆದ ಅನುಷ್ಠಾನ ಸಮಿತಿಯ ಪದಗ್ರಹಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳು ರಾಜ್ಯದಲ್ಲಿ ಜನಪರವಾಗಿರುವುದರಿಂದ ಜನಪ್ರಿಯತೆ ಗಳಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ತಾಲೂಕು ಪಂಚಾಯಿತಿಯಲ್ಲಿ ಕಚೇಯಲ್ಲಿ ತೆರೆಯಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ರಚಿಸಲಾಗಿದ್ದು, ಕಾಡುಕೊತ್ತನಹಳ್ಳಿ ಬಸವರಾಜು ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರೊಂದಿಗೆ ಸದಸ್ಯರಾಗಿ ಎಸ್.ರಾಜಣ್ಣ, ಭಾನುಪ್ರಕಾಶ್, ಗೀತಾ, ನಾಗಮ್ಮ, ಎಂ.ಬಿ.ರಾಜು, ಬಿ.ಎಚ್.ವೆಂಕಟೇಶ್, ಕೆ.ಎಂ.ಕಿರಣ್, ವೈ.ಎನ್.ಬೋರೇಗೌಡ, ಎಂ.ಸಿದ್ದಲಿಂಗಪ್ರಸಾದ್, ಡಿ.ವಿಜಯಕುಮಾರ್, ಬಿ.ಮನುಕುಮಾರ್, ಫೈರೋಜ್ ಖಾನ್, ವಿ.ರಘುಪತಿ, ಎಚ್.ಎಸ್.ಮಹೇಂದ್ರ, ತಾಪಂ ಇಒ ರಾಮಲಿಂಗಯ್ಯ ಸೇರಿ 15 ಜನ ಸದಸ್ಯರು ಸಮಿತಿಯಲ್ಲಿರಲಿದ್ದು ಅರ್ಹ ಫಲಾನುಭವಿಗಳ ಯಾವುದೇ ಅಹವಾಲುಗಳು ಇದ್ದರೆ ಇವರು ಸ್ಪಂದಿಸಲಿದ್ದಾರೆ ಎಂದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳ ನೂತನ ಅನುಷ್ಠಾನ ಸಮಿತಿಯ ಅಧ್ಯಕ್ಷರು ಸೇರಿದಂತೆ ಸದಸ್ಯರುಗಳನ್ನು ಶಾಸಕರು ಅಭಿನಂದಿಸಿದರು.
ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಪ್ರಸನ್ನ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಸವರಾಜು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಪಂ ಇಒ ರಾಮಲಿಂಗಯ್ಯ ಇದ್ದರು.