ದಿನಚರಿಯ ಒಂದು ಭಾಗ ಯೋಗ

21 HRS 01
ಹಿರೀಸಾವೆ ಹೋಬಳಿ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೋಗ ಕಾರ್ಯಕ್ರಮ ಶುಕ್ರವಾರ ನಡೆಯಿತು.
Published on

ಹಿರೀಸಾವೆ: ಹೋಬಳಿಯ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸಂಸ್ಥೆ ಹಾಗೂ ವಿಜಯವಾಣಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಶುಕ್ರವಾರ ಯೋಗ ಕಾರ್ಯಕ್ರಮ ನಡೆಯಿತು.

ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ ಮಾತನಾಡಿ, ಯೋಗ ಹಾಗೂ ಧ್ಯಾನ ಮಾಡುವ ಅಭ್ಯಾಸವನ್ನು ತಮ್ಮ ದಿನಚರಿಯ ಒಂದು ಭಾಗವಾಗಿ ರೂಢಿಸಿಕೊಳ್ಳಿ. ಇದರಿಂದ ಆರೋಗ್ಯದ ಸುಧಾರಣೆ ಜತೆಗೆ ಶಾಂತಿಯುತ ಮನಸ್ಸು ಹಾಗೂ ನೆಮ್ಮದಿಯ ಬದುಕು ನಿಮ್ಮದಾಗುತ್ತದೆ ಎಂದು ಹೇಳಿದರು.

ಯೋಗ ಹಾಗೂ ಧ್ಯಾನಕ್ಕೆ ಸಿಂಧೂ ಕಣಿವೆಯ ನಾಗರೀಕತೆಗೂ ಹಿಂದಿನ ಐತಿಹ್ಯವಿದ್ದು ಪ್ರಸ್ತುತ ದಿನಗಳಲ್ಲಿ ಯೋಗವು ಆರೋಗ್ಯದ ಸುಧಾರಣೆಯ ಒಂದು ಪ್ರಮುಖ ಅಂಗವಾಗಿದೆ. ಧ್ಯಾನದ ಮೂಲಕ ಪ್ರಜ್ಞೆಯ ಉನ್ನತ ಹಂತಗಳನ್ನು ಅನುಭವಿಸುವ ತಂತ್ರಗಳನ್ನು ಕಲಿಯಬಹುದು ಎಂದು ತಿಳಿಸಿದರು.

ಆಧುನಿಕರಣ ಮುಂದುವರಿದಂತೆ ವೈಭವದ ಜೀವನದಲ್ಲಿ ಮುಳುಗಿರುವ ನಾವು ಪ್ರತಿಯೊಂದಕ್ಕೂ ಆಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋಗುತಿದ್ದು ಪುರಾತನ ಆಚಾರ-ವಿಚಾರ ಹಾಗೂ ಅನುಭವಗಳು ಕಣ್ಮರೆಗೆ ಸರಿಯುತ್ತಿವೆ. ಆರೋಗ್ಯದ ಸುಧಾರಣೆ ಹಾಗೂ ಶಾಂತಿಯುತ ಬದುಕಿಗಾಗಿ ಯೋಗ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ನೀಡಿದರು.

ಜಗದ್ಗುರು ಶ್ರೀ.ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪೂಜೆ ಸಲ್ಲಿಸಲಾಯಿತು. ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಶಂಭುನಾಥ ಸ್ವಾಮೀಜಿ ಅವರ ಆಶಿರ್ವಾದದೊಂದಿಗೆ ಶ್ರೀ ಶಿವಪುತ್ರನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಿತು.

ಯೋಗ ಕಾರ್ಯಕ್ರಮದಲ್ಲಿ 950 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಮಧುಸೂದನ್, ಸಹಶಿಕ್ಷಕರಾದ ಅಶೋಕ್, ಡಿ.ಕೆ.ಹರೀಶ್, ಜೆ.ಬಿ.ಜಮುನಾ, ಧನಲಕ್ಷ್ಮೀ, ಸವಿತಾ, ಶ್ರೀದೇವಿ, ಶುಭಾ, ಚೈತ್ರಾ, ವಿನೋದಾ, ಗಾಯತ್ರಿ, ಉಮಾಮಣಿ, ಭಾರತಿ, ಶ್ರುತಿ, ಕೀರ್ತಿ, ಸಿಂಧು, ಸುಮಾ, ಲಾವಣ್ಯಾ, ಕವಿತಾ, ನಂದಿನಿ, ಪಾರ್ವತಿ, ಸುಧಾ ಹಾಗೂ ಮಮತಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net