ರಂಜಿಸಿದ ಪ್ರೇಮಕಲಾ ಸೋಗಿನ ಮೆರವಣಿಗೆ

A parade of entertaining love songs
A parade of entertaining love songs
Published on

ಗುಳೇದಗುಡ್ಡ: ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ನಿಮಿತ್ತ ಪಟ್ಟಣದ ವಿವಿಧ ಮ್ಯಾಳಗಳಿಂದ ಹಮ್ಮಿಕೊಂಡಿದ್ದ ಹೆಣದ ಸೋಗಿನ ಮೆರವಣಿಗೆ ರಸ್ತೆಯುದ್ದಕ್ಕೂ ನಿಂತಿದ್ದ ಸಾವಿರಾರು ಜನರ ಗಮನ ಸೆಳೆಯಿತು. ಹೆಣ್ಣು ಮಕ್ಕಳ ವೇಷ ತೊಟ್ಟ ಪುರುಷರ ಮಾತುಗಳನ್ನು ಕೇಳಿ ನೆರೆದಿದ್ದ ಜನರು ಬಿದ್ದು ಬಿದ್ದು ನಕ್ಕರು.

ಪಟ್ಟಣದ ರಜಂಗಳ ಪೇಟೆಯ ಪ್ರೇಮಕಲಾ ನಾಟ್ಯ ಸಂಘದ ವತಿಯಿಂದ ನಡೆದ ಹೆಣದ ಸೋಗಿನ ಮೆರವಣಿಗೆ ರಜಂಗಳ ಪೇಟೆಯ ಹನುಮಂತ ದೇವಸ್ಥಾನದಿಂದ ಪ್ರಾರಂಭವಾಗಿ ಪಟ್ಟಣದ ಅರಳಿಕಟ್ಟೆ, ಚೌಬಜಾರ, ಗಚ್ಚಿನಕಟ್ಟಿ. ಕಂಠಿ ಪೇಟೆ, ಪುರಸಭೆ, ಪವಾರ ವೃತ್ತ, ಪ್ರಮುಖ ರಸ್ತೆಯಲ್ಲಿ ಸಾಗಿತು.

ಪ್ರೇಮಕಲಾ ನಾಟ್ಯ ಸಂಘದ ಗೆಳೆಯರ ಬಳಗದ ವತಿಯಿಂದ ನಡೆದ ಕಲ್ಪಿತ ಶವಯಾತ್ರೆಯಲ್ಲಿ ಶವದ ಸೋಗಿನಲ್ಲಿ ಶಂಕ್ರಪ್ಪ ಜನಿವಾರದ, ಮಹಿಳಾ ವೇಷಧಾರಿಗಳಾಗಿ ಶಿವಾನಂದ ಮನಗೂಳಿ, ವಿನಾಯಕ ಚೌಡಾಪೂರ, ಬಸು ಮಿಣಜಗಿ, ಗೋಪಾಲ ಪಪ್ತಿ ಸಂಗಡಿಗರು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಪುರಸಭೆಯ ಸದಸ್ಯ ಶ್ಯಾಮಸುಂದರ ಮೇಡಿ, ಕೆಮಣ್ಣ ಮೇಡಿ, ಬಸವರಾಜ ಕೊಂಗಿ, ಬಾಸ್ಕರಪ್ಪ ಗಾಡದ, ಮಾರ್ಕಂಡೆಪ್ಪ ದೇವರೆಡ್ಡಿ, ನಾರಾಯಣಪ್ಪ ಜವಳಿ, ಟೋಪಣ್ಣ ರೂಡಗಿ, ಶಂಕ್ರಪ್ಪ ಶಿರೂರ, ಶಿವಪ್ಪ ಶೀಲವಂತ, ಕುಪ್ಪಣ್ಣ ಜವಳಿ, ಈಶಪ್ಪ ಚೌಡಾಪೂರ, ಶಿವಪ್ಪ ಮಿಣಜಗಿ, ಯಂಕಪ್ಪ ಬಾವಿಕಟ್ಟಿ, ಮಾರುತಿ ಕೊಂಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net