ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯದ ಯುವ ರೈತ: ಅಂಗಾಗ ದಾನ ಮಾಡಿ ನಾಲ್ವರ ಜೀವ ಉಳಿಸಿದ

New Project
Published on

ಮೈಸೂರು: ಮಂಡ್ಯದ 27 ವರ್ಷದ ಯುವ ರೈತನೊಬ್ಬ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ನಾಲ್ವರಿಗೆ ಬದುಕು ನೀಡಿದ್ದಾನೆ.

ಮಂಡ್ಯ ಜಿಲ್ಲೆ ತೂಬಿನಕೆರೆ ಗ್ರಾಮದ ರೈತ ದಂಪತಿ ಹನುಮಂತು ಮತ್ತು ಪೂರ್ಣಿಮಾ ಅವರ ಪುತ್ರ ಹೇಮಂತ ಕುಮಾರ್ ಕಳೆದ ಗುರುವಾರ ತೆಂಗಿನ ಮರದಲ್ಲಿ ಕಾಯಿ ಕೀಳುತ್ತಿದ್ದರು. ಆಯತಪ್ಪಿ ಮರದಿಂದ ಕೆಳಗೆ ಬಿದ್ದಿದ್ದ ಹೇಮಂತಕುಮಾರ್​ ಗಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ತೆಗೆ ದಾಖಲಿಸಲಾಗಿತ್ತು.

ತಲೆಗೆ ತೀವ್ರ ಪೆಟ್ಟಾಗಿ ಕೋಮಾಗೆ ಹೇಮಂತಕುಮಾರ್​ ತಲುಪಿದ್ದರು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಫಲಿಸಲಿಲ್ಲ. ಮಿದಳು ನಿಷ್ಕ್ರಿಯಗೊಂಡಿತ್ತು. ಸಾವಿನಲ್ಲೂ ಸಾರ್ಥಕತೆ ಮೆರೆದ ಹೇಮಂತಕುಮಾರ್​ರ ಪಾಲಕರು, ಮಗನ ಅಂಗಾಗ ದಾನಕ್ಕೆ ಸಮ್ಮತಿಸಿದರು. ಹೃದಯದ ಕವಾಟ, 2 ಕಿಡ್ನಿ, 1 ಲಿವರ್ ಅನ್ನು ದಾನ ಮಾಡಿದರು. ಸಾವಿನಲ್ಲೂ ಹೇಮಂತಕುಮಾರ್​ ನಾಲ್ವರ ಜೀವ ಉಳಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net