ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಮುಖ್ಯ

sep15ss 4 pisan masacharane udgatane
ದೊಡ್ಡಕುಂದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ದಾಕ್ಷಾಯಿಣಿ ಉದ್ಘಾಟಿಸಿದರು. ಮಹಮ್ಮದ್ ಹನೀಫ್, ದುಂಬಿತಾ, ರಕ್ಷಿತ್, ಉಮರ್, ನಿರ್ಮಲಾ, ವನಜಾಕ್ಷಿ ಬೆಂಬಳೂರು, ಶೋಭಾ ಊರುಗುತ್ತಿ , ವನಿತಾಶಿರಹ ಇದ್ದರು.
Published on

ಶನಿವಾರಸಂತೆ : ಉತ್ತಮ ಆರೋಗ್ಯ ಹೊಂದಲು ಪೌಷ್ಟಿಕ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಹನೀಫ್ ಹೇಳಿದರು.
ಸಮೀಪದ ದೊಡ್ಡಕುಂದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ತಿಂಗಳು ಅಂಗನವಾಡಿ ಕೇಂದ್ರದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವಿತರಿಸುವ ಆಹಾರದ ಕಿಟ್‌ಗಳನ್ನು ಸರಿಯಾದ ಸಮಯಕ್ಕೆ ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಾಕ್ಷಾಯಿಣಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮತ್ತು 6 ತಿಂಗಳ ಮಕ್ಕಳಿಗೆ ಅನ್ನಪ್ರಾಶನ ಮಾಡಲಾಯಿತು. ಅಂಗನವಾಡಿಯಲ್ಲಿ ಪೌಷ್ಟಿಕಾಂಶಯುಕ್ತ ಧಾನ್ಯಗಳು ಮತ್ತು ಹಣ್ಣು-ಹಂಪಲು, ತರಕಾರಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಆರೋಗ್ಯ ನಿರೀಕ್ಷಕಿ ದುಂಬಿತಾ, ಬ್ಯಾಡಗೊಟ್ಟ ಅಂಗನವಾಡಿ ಶಿಕ್ಷಕಿ ಚಿನ್ನಮ್ಮ, ಆರೋಗ್ಯ ಇಲಾಖೆಯ ರಕ್ಷಿತ್ ಮತ್ತು ಸ್ಥಳಿಯ ಪ್ರಮುಖರಾದ ಡಿ.ಎ.ಉಮ್ಮರ್, ಅಂಗನವಾಡಿ ಶಿಕ್ಷಕಿಯರಾದ ನಿರ್ಮಲಾದೊಡ್ಡಕುಂದ , ವನಜಾಕ್ಷಿ ಬೆಂಬಳೂರು, ಶೋಭಾ ಊರುಗುತ್ತಿ, ವನಿತಾಶಿರಹ, ವಿಮಲಾ ಕ್ಯಾತೆ, ಚಂದ್ರ ಶಿವರಳ್ಳಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರು ಹಾಗೂ ಮಹಿಳೆಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net