ಇದ್ದು ಇಲ್ಲದಂತಿರುವ ಪಶು ಆಸ್ಪತ್ರೆ

A non-existent animal hospital
A non-existent animal hospital
Published on

ಪ್ರವೀಣ ಬುದ್ನಿ ತೇರದಾಳ: ತಾಲೂಕಿನ ಗ್ರಾಮಗಳಲ್ಲಿ ಪಶು ಚಿಕಿತ್ಸೆಯ ಸೇವೆಗಾಗಿ ಪೂರ್ಣಾವಧಿ ವೈದ್ಯರಿಲ್ಲದೆ ರೈತರು ಪರದಾಡುತ್ತಿದ್ದಾರೆ. 7,800 ಧನ-ಕರುಗಳನ್ನು ಒಳಗೊಂಡ ತೇರದಾಳ ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿಯಿಲ್ಲದೇ ಕೀಲಿ ಜಡಿಯಲಾಗಿದೆ. ರೈತರು ಧನ-ಕರುಗಳನ್ನು ಕಟ್ಟಿಕೊಂಡು ಪಕ್ಕದ ರಬಕವಿ-ಬನಹಟ್ಟಿ ತಾಲೂಕಿನ ಪಶು ಆಸ್ಪತ್ರೆಗೆ ತೆರಳುವಂತಾಗಿರುವುದು ವಿಪರ್ಯಾಸ.

ಹೋಬಳಿಮಟ್ಟದ ಆಸ್ಪತ್ರೆಗೆ ಬೇಕಿರುವ ಮುಖ್ಯವೈದ್ಯಾಧಿಕಾರಿ, ಪರೀಕ್ಷಕ ಸಿಬ್ಬಂದಿ, ಡಿ ದರ್ಜೆ ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಪ್ರಭಾರಿ ವೈದ್ಯ ಮತ್ತು ಡಿ ದರ್ಜೆಯ ಒಬ್ಬ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ತಾಲೂಕು ದರ್ಜೆ ಆಸ್ಪತ್ರೆಗೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ದನಕರು, ಕುರಿಗಳು ಸಾವನ್ನಪ್ಪಿದ ನಂತರ ಸರ್ಕಾರದಿಂದ ಬರುವ ಸಹಾಯಧನಕ್ಕಾಗಿ ಮರಣೋತ್ತರ ಪರೀಕ್ಷೆಗೆ ಹಾಗೂ ಜಂತು ಹುಳು ಸೇರಿ ಹಲವು ಔಷಧಗಳಿಗೆ ರಬಕವಿ-ಬನಹಟ್ಟಿ ಆಸ್ಪತ್ರೆಗೆ ತೆರಳಬೇಕಾಗಿದೆ ಎಂದು ಕುರಿಗಾಹಿಗಳು ಅಸಮಾಧಾನ ಹೊರಹಾಕಿದ್ದಾರೆ.

ತಾಲೂಕಿನ ಹಳಿಂಗಳಿ ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯದಲ್ಲಿ ಪರೀಕ್ಷಕರೊಬ್ಬರು ಮತ್ತು ಸಸಾಲಟ್ಟಿ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರೊಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಏಳು ಗ್ರಾಮಗಳಿಗೆ ಪಶು ಸೇವೆ ದೇವರಿಗೆ ಪ್ರೀತಿ ಎಂಬಂತಾಗಿದೆ.

ನೂತನ ಕಟ್ಟಡ ಯಾವಾಗ?: 2024-25ನೇ ಸಾಲಿನ ಪಶು ಇಲಾಖೆಯ ಅನುದಾನದಲ್ಲಿ ನೂತನ ಕಟ್ಟಡ ಮಂಜೂರಾಗಿದ್ದು, ಪುರಸಭೆ ಜಾಗಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಈಗಾಗಲೇ ಜಾಗ ಸ್ವಚ್ಛತೆಗೊಳಿಸಿ ಆರು ತಿಂಗಳು ಕಳೆದರೂ ಕಟ್ಟಡದ ಕಾರ್ಯಾರಂಭವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net