ಉಗ್ರ ಸಂಘಟನೆ ಜತೆ ಲಿಂಕ್​: ಉಲ್ಲಾಳದಲ್ಲಿ ಮಾಜಿ ಶಾಸಕರ ಪುತ್ರನ ಮನೆ ಮೇಲೆ NIA ದಾಳಿ, ಮಹಿಳೆ ಬಂಧನ

ಉಗ್ರ ಸಂಘಟನೆ ಜತೆ ಲಿಂಕ್​: ಮಾಜಿ ಶಾಸಕರ ಪುತ್ರನ ಮನೆ ಮೇಲೆ NIA ದಾಳಿ! #TerrorLink #mangalore #ullalaidinabba - youtube
Published on

ಮಂಗಳೂರು: ಉಳ್ಳಾಲದ ಮಾಜಿ ಶಾಸಕ ದಿ. ಬಿ.ಎಂ.ಇದಿನಬ್ಬ ಪುತ್ರ ಬಿ.ಎಂ.ಬಾಷಾ ಅವರ ಮನೆ ಮೇಲೆ ಮತ್ತೆ ಎನ್​ಐಎ ದಾಳಿ ಮಾಡಿದ್ದು, ಬಿ.ಎಂ.ಪಾಷಾ ಅವರ ಸೊಸೆ ದೀಪ್ತಿ ಅಲಿಯಾಸ್ ಮರಿಯಂ ಎಂಬುವರನ್ನ ಬಂಧಿಸಿದೆ.

ಐಸಿಎಸ್​ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆ ಕಳೆದ ಆ.4ರಂದು ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ.ಬಾಷಾ ಅವರ ಮನೆ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದರು. ಅಂದು ಬಾಷಾನ ಕಿರಿಯ ಪುತ್ರ ಅಬ್ದುಲ್ ರೆಹಮಾನ್​ನನ್ನು ಬಂಧಿಸಿದ್ದರು. ಆ ವೇಳೆ ಬಾಷಾರ ಮತ್ತೊಬ್ಬ ಪುತ್ರ ಅನಾಸ್ ಎಂಬಾತನ ಪತ್ನಿ ದೀಪ್ತಿ ಅಲಿಯಾಸ್ ಮರಿಯಂ ಮೇಲೆ ಅನುಮಾನ ಬಂದಿತ್ತಾದರೂ ಅವರಿಗೆ ಸಣ್ಣ ಮಗುವಿದ್ದ ಕಾರಣ ಎನ್​ಐಎ ಅಧಿಕಾರಿಗಳು ಕೇವಲ ವಿಚಾರಣೆ ನಡೆಸಿ ಬಿಟ್ಟದರು. ಇದೀಗ ಮತ್ತೆ ಮನೆಗೆ ದಾಳಿ ನಡೆಸಿದ ಎನ್​ಐಎ ಅಧಿಕಾರಿಗಳು ದೀಪ್ತಿಯನ್ನು ವಶಕ್ಕೆ ಪಡೆದಿದೆ.

ಉಳ್ಳಾಲದ ಮನೆಯಿಂದ ಟೆಂಪೋ ಟ್ರಾವೆಲರ್ ವಾಹನದಲ್ಲಿ ದೀಪ್ತಿಯನ್ನು ಕರೆದುಕೊಂಡು ಹೋದ ಎನ್​ಐಎ ತಂಡ, ಮಂಗಳೂರಿನ ವೆನ್​ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​ ಮಾಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ದೆಹಲಿಗೆ ಕರೆದುಕೊಂಡು ಹೋಗಲಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net