

ಅಂಕೋಲಾ: ಪತ್ರಕರ್ತರು ಸಮಾಜದ ಕನ್ನಡಿ ಇದ್ದಂತೆ. ಎಲೆಮರೆಯ ಕಾಯಿಗಳನ್ನು ಪರಿಚಯಿಸುವ ಮೂಲಕ, ನೊಂದವರ ಪರ ದನಿಯಾಗುವ ಕಾರ್ಯವನ್ನು ಪತ್ರಿಕೆಗಳು ಅಚ್ಚುಕಟ್ಟಾಗಿ ಮಾಡುತ್ತಿವೆ ಎಂದು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಹೇಳಿದರು.
ಲಯನ್ಸ್ ಕ್ಲಬ್ ಕರಾವಳಿ ಆಶ್ರಯದಲ್ಲಿ ಪಟ್ಟಣದ ಪಿ.ಎಂ. ಪಪೂ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ, ನಿಸ್ವಾರ್ಥ, ನಿಷ್ಕಳಂಕ ಪತ್ರಕರ್ತರಿಗೆ ಯಾರ ಅಂಜಿಕೆಯೂ ಇರುವದಿಲ್ಲ. ಪತ್ರಿಕೋದ್ಯಮ ಸಮಾಜದ ಹುಳುಕನ್ನು ಹುಡುಕಿ ಬೆಳಕು ನೀಡುವ ಕಾಯಕ ಮಾಡುತ್ತಿದೆ ಎಂದರು.
ಪತ್ರಕರ್ತ ವಿಠಲದಾಸ ಕಾಮತ ಮಾತನಾಡಿ, ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಾನಂದ ಮಾತನಾಡಿದರು.
ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಐದು ಮಕ್ಕಳ ಜೀವ ರಕ್ಷಿಸಿದ ಉಳವರೆ ಗ್ರಾಮದ ಹುವಾ ಸೋಮು ಗೌಡ ಅವರಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ತಾಲೂಕು ಪತ್ರಕರ್ತರನ್ನು ಗೌರವಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಗೌರವಾಧ್ಯಕ್ಷ ರಾಘು ಕಾಕರಮಠ, ಪ್ರಾಚಾರ್ಯ ಫಾಲ್ಗುಣ ಗೌಡ, ಗಿರಿಧರ ಆಚಾರ್ಯ ಉಪಸ್ಥಿತರಿದ್ದರು. ಎಸ್.ಆರ್. ಉಡುಪ, ಮಹಾಂತೇ ರೇವಡಿ, ಉಲ್ಲಾಸ ಹುದ್ದಾರ, ಸದಾನಂದ ಶೆಟ್ಟಿ ನಿರ್ವಹಿಸಿದರು.