

ಭದ್ರಾವತಿ: ಸಂಘವು ಕಳೆದ ಸಾಲಿನಲ್ಲಿ 23 ಸಾವಿರ ರೂ. ಲಾಭ ಗಳಿಸಿದ್ದು ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳ ಅನುಷ್ಠಾನದ ಮೂಲಕ 1.78 ಲಕ್ಷ ರೂ. ಲಾಭ ಗಳಿಸುವ ನಿರೀಕ್ಷೆಯ ಬಜೆಟ್ ಸಿದ್ಧಪಡಿಸಲಾಗಿದೆ ಎಂದು ಸುಭಾಷ್ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಪಿ.ಸತೀಶ್ ತಿಳಿಸಿದರು.
ನಗರದ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿ, ಠೇವಣಿದಾರರ ಸಂಖ್ಯೆ ಹೆಚ್ಚಳ ಮಾಡಲು ಎಲ್ಲಾ ನಿರ್ದೇಶಕರು ಪ್ರಯತ್ನಿಸಬೇಕು. ಸಾಲ ಪಡೆದ ಸದಸ್ಯರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಆರ್ಥಿಕ ಮುನ್ನಡೆಗೆ ಸಹಕರಿಸಬೇಕು ಎಂದರು.
ಸಂಘದ ಉಪಾಧ್ಯಕ್ಷ ಜಿ.ಪಿ.ದತ್ತಾತ್ರಿ, ಎಂ.ಎಸ್.ಸುರೇಶಪ್ಪ. ಎಸ್.ಪಿ.ಜಂಗಮಪ್ಪ, ರಂಗನಾಥ್, ಎಂ.ಡಿ.ನಾಗೇಶ್, ದ್ರಾಕ್ಷಾಯಣಿ, ಬಿ.ಎನ್.ಲೀಲಾಬಾಯಿ, ಇಂದುಶೇಖರ್ ಇತರರಿದ್ದರು.