ಸಮಸಮಾಜ ನಿರ್ಮಾಣಕ್ಕೆ ಬೇಕಿದೆ ಹೊಸ ಪಕ್ಷ

ಹರಪನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ‘ಸಮಾನತೆಗಾಗಿ ನಾವು ನೀವು’ ಕಾರ್ಯಕ್ರಮದಲ್ಲಿ ನಟ ಚೇತನ್ ಅಹಿಂಸಾ ಮಾತನಾಡಿದರು. ಪ್ರಮುಖರಾದ ಕೆ.ಎಂ.ಬಸವರಾಜಯ್ಯ, ಎಚ್.ಎಂ.ಸಂತೋಷ, ಮಾಲತೇಶ ಮರಿಗೌಡರು, ಗುಡಿಹಳ್ಳಿ ಹಾಲೇಶ ಇತರರಿದ್ದರು.
ಹರಪನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ‘ಸಮಾನತೆಗಾಗಿ ನಾವು ನೀವು’ ಕಾರ್ಯಕ್ರಮದಲ್ಲಿ ನಟ ಚೇತನ್ ಅಹಿಂಸಾ ಮಾತನಾಡಿದರು. ಪ್ರಮುಖರಾದ ಕೆ.ಎಂ.ಬಸವರಾಜಯ್ಯ, ಎಚ್.ಎಂ.ಸಂತೋಷ, ಮಾಲತೇಶ ಮರಿಗೌಡರು, ಗುಡಿಹಳ್ಳಿ ಹಾಲೇಶ ಇತರರಿದ್ದರು.
Published on

ಹರಪನಹಳ್ಳಿ: ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರವಾಗಿವೆ. ಆದ್ದರಿಂದ, ಸಮಸಮಾಜ ನಿರ್ಮಾಣಕ್ಕೆ ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷದ ರಚನೆ ಅಗತ್ಯ ಎಂದು ನಟ ಚೇತನ್ ಅಹಿಂಸಾ ಹೇಳಿದರು. ಪಟ್ಟಣದಲ್ಲಿ ಶನಿವಾರ ‘ಸಮಾನತೆಗಾಗಿ ನಾವು ನೀವು’ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವ ಪರ್ಯಾಯ ರಾಜಕಾರಣದ ಅವಶ್ಯಕತೆ ಇದೆ. ಅನ್ಯಾಯ, ಅಸಮಾನತೆ ಕೂಡಿದ ವ್ಯವಸ್ಥೆ ಇದ್ದು, ರಾಜಕಾರಣಿಗಳು ಅಧಿಕಾರ, ಹಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಜಾತಿ, ಲಿಂಗ ಅಸಮಾನತೆ ದೇಶದ ವ್ಯವಸ್ಥೆಯ ಮೊದಲ ಶತ್ರುವಾಗಿದೆ. ಇದಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಕಾರಣ. ಪಾರದರ್ಶಕ ನೀತಿಗಳಿಗಾಗಿ ಲೋಕಾಯುಕ್ತ ಬಲಪಡಿಸಬೇಕಾಗಿದೆ. ಬಂಡವಾಳ ಶಾಹಿ ವ್ಯವಸ್ಥೆಗೆ ಪ್ರತಿರೋಧ ಒಡ್ಡಬೇಕಾಗಿದೆ. ಆದ್ದರಿಂದ, ಸಮಾನತೆಗಾಗಿ ಹೊಸ ರಾಜಕೀಯ ಪಕ್ಷದ ರಚಿಸಬೇಕಿದೆ ಎಂದರು. ಪ್ರಗತಿ ಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿದರು.

ಪ್ರಮುಖರಾದ ಸುಭಾಷ್, ಹೇಮಣ್ಣ ಮೋರಗೇರಿ, ಕಬ್ಬಳ್ಳಿ ಮೈಲಪ್ಪ, ಇರ್ಫಾನ್ ಮುದುಗಲ್, ವೆಂಕಟೇಶ್ ನಾಯ್ಕ, ಭರಮಣ್ಣ, ಮುನ್ನಾ, ಮಂಜುನಾಥ, ಡಾ.ಬಸವರಾಜ, ಉಮೇಶ, ಚಿಗರಿ ವೆಂಕಟೇಶ, ಆನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net