

ಕಿರುವಾರ ಎಸ್.ಸುದರ್ಶನ್ ಕೋಲಾರ
ತಾಲೂಕಿನ ವಕ್ಕಲೇರಿ ಸಮೀಪವಿರುವ ನವೋದಯ ವಸತಿ ಶಾಲೆಯು ನರೇಗಾ ಸ್ಪರ್ಶದಿಂದ ಹೊಸ ರೂಪ ಪಡೆದುಕೊಂಡಿದೆ.
ನರೇಗಾ ಯೋಜನೆಯಡಿ ಒಟ್ಟು 31 ಲಕ್ಷ ರೂ. ವೆಚ್ಚದಲ್ಲಿ 10ಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಶಾಲೆಯು ಗ್ರಾಮದ ಹೊರವಲಯದಲ್ಲಿದ್ದು, ಕ್ರೀಡಾಂಗಣ, ಕಾಲುವೆ, ಸಿಸಿ ರಸ್ತೆ ನಿರ್ಮಾಣ, ಪೌಷ್ಟಿಕ ತೋಟ, ಅರಣ್ಯೀಕರಣ, ಚರಂಡಿ ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಶೌಚಗೃಹ, ಇಂಗುಗುಂಡಿ, ಸಿಸಿ ರಸ್ತೆ, ಚರಂಡಿ, ಬದು ನಿಮಾರ್ಣ, ಸಣ್ಣ ಕೃಷಿ ಹೊಂಡ ನಿಮಾರ್ಣ, ಬಾಸ್ಕೆಟ್ ಬಾಲ್, ುಟ್ಬಾಲ್ ಕೋರ್ಟ್ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ. ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವ ಪಂಚಾಯಿತಿ ಅಧಿಕಾರಿಗಳು ಆದ್ಯತೆ ಮೇರೆಗೆ ಕೆಲಸಗಳನ್ನು ಆರಂಭಿಸಿದ್ದಾರೆ. ಕೆಲ ಅಭಿವೃದ್ಧಿ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ.
ಯೋಜನೆಯಡಿ 5,113 ಮಾನವ ದಿನ ಸೃಜಿಸಿ ಕಾರ್ಮಿಕರಿಗೆ 15 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಶಾಲಾ ಆವರಣದಲ್ಲಿ ಖೋಖೋ, ಕಬಡ್ಡಿ, ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ ಪ್ರಗತಿಯಲ್ಲಿದೆ. ಅರಣ್ಯೀಕರಣದಡಿ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಗಿದೆ. ಪೌಷ್ಟಿಕ ತೋಟದಲ್ಲಿ ತರಕಾರಿ, ಹಣ್ಣು ಬೆಳೆಗಳನ್ನು ನಾಟಿ ಮಾಡಲಾಗಿದೆ. ಈ ಮೂಲಕ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲಾಗಿದೆೆ. ಆವರಣದಲ್ಲಿ ಶಾಲಾ ಕೊಠಡಿಗಳು, ಭೋಜನಾ ಶಾಲೆ, ಬಾಲಕ ಮತ್ತು ಬಾಲಕರಿಯರ ವಸತಿ ಗೃಹಗಳು, ಬೋಧಕ ಮತ್ತು ಬೋಧಕೇತರ ವಸತಿ ಗೃಹಗಳಿವೆ.
ಓಡಾಡಲು ಸಮರ್ಪಕ ರಸ್ತೆ ಇರಲಿಲ್ಲವಾದ್ಧರಿಂದ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಕಾಲುವೆ ನಿರ್ಮಿಸಲಾಗಿದೆ.
ಮಾದರಿ ಶಾಲೆಯಾಗಿ ಪರಿವರ್ತನೆ: ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳು ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳ ಸಬಲೀಕರಣದ ಜತೆಗೆ ವಸತಿ ಶಾಲೆಗಳ ಅಭಿವೃದ್ಧಿಗೂ ಆಸಕ್ತಿ ತೋರಿಸಿದ್ದಾರೆ. ಈಗ ವಕ್ಕಲೇರಿ ಗ್ರಾಪಂ ವ್ಯಾಪ್ತಿಯ ನವೋದಯ ಶಾಲೆ ಆಯ್ಕೆ ಮಾಡಿಕೊಂಡು ಮಾದರಿ ಶಾಲೆಗಳಾಗಿ ಪರಿವರ್ತಿಸಲು ಕ್ರಮ ಕೈಗೊಂಡಿದ್ದಾರೆ.
ಖಾಸಗಿ ಶಾಲೆ ಮೀರಿಸಿದ ಯೋಜನೆ: ಸಮುದಾಯ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗಿದೆ. ಮೊದಲು ಸರ್ಕಾರಿ ಶಾಲೆ, ಅಂಗನವಾಡಿ, ಸರ್ಕಾರಿ ವಸತಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಖೋಖೋ, ಕಬಡ್ಡಿ, ವಾಲಿಬಾಲ್, ಬ್ಯಾಡ್ಮಿಂಟನ್, ವಾಕಿಂಗ್ ಟ್ರ್ಯಾಕ್, ಮಳೆ ನೀರು ಸಂಗ್ರಹ ಕಾಮಗಾರಿಗಳನ್ನು ಮಾಡಲಾಗಿದೆ. ಸರ್ಕಾರಿ ಶಾಲೆಗಳು ಯಾವ ಖಾಸಗಿಗೂ ಕಡಿಮೆ ಇರಬಾರದು ಎಂದು ಆಸಕ್ತಿವಹಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಕೋಲಾರ ತಾಲೂಕು ಕಾರ್ಯನಿರ್ವಹಣಾಧಿಕಾರಿ ಬಿ.ಎಂ.ಮಂಜುನಾಥ್ ತಿಳಿಸಿದ್ದಾರೆ.
ಮಕ್ಕಳ ಸಂತಸ: ಸುಸಜ್ಜಿತ ಆಟದ ಮೈದಾನ ಇರಲಿಲ್ಲ, ಇದೀಗ ರಸ್ತೆ, ಕಾಲುವೆ, ಬಾಸ್ಕೆಟ್ಬಾಲ್ ಕೋರ್ಟ್ ನಿರ್ಮಾಣ ಆಗಿದೆ. ಕಬಡ್ಡಿ, ಖೋಖೋ ಕೋರ್ಟ್ಗಳನ್ನು ನಿರ್ಮಾಣ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ನಾವು ಕ್ರೀಡೆಗಳಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಸಮುದಾಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸರ್ಕಾರಿ ಶಾಲಾ& ಕಾಲೇಜುಗಳಿಗೆ ಆದ್ಯತೆ ಮೇರೆಗೆ ಕೆಲಸಗಳನ್ನು ನೀಡಲಾಗಿದೆ. ಮಾದರಿ ಶಾಲೆಗಳನ್ನಾಗಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.
ಬಿ.ಎಂ.ನಾರಾಯಣಸ್ವಾಮಿ, ತಾಲೂಕು ಪಂಚಾಯಿತಿ ಇಒ ಸರ್ಕಾರಿ ವಸತಿ ಶಾಲೆಯಲ್ಲಿ ಆಟದ ಮೈದಾನ, ಉದ್ಯಾನ, ರಸ್ತೆ, ಕಾಲುವೆ ನಿರ್ಮಿಸಿ ರುವುದರಿಂದ ಶಾಲೆಗೆ ಹೊಸ ರೂಪ ಸಿಕ್ಕಿದೆ. ಇದು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದೆ. ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು.ಉಮಾ ಪ್ರಾಚಾಯೆರ್, ನವೋದಯ ಶಾಲೆ