

ಕಾಸರಗೋಡು: ಕುಂಬಳೆ ಸನಿಹದ ಪಚ್ಚಂಬಳದಲ್ಲಿ ಹೊಸ ಥಾರ್ ಕಾರು ಬೆಂಕಿ ಹತ್ತಿಕೊಂಡು ಪರಿಣಾಮ ಸಂಪೂರ್ಣ ಉರಿದು ನಾಶಗೊಂಡಿದೆ. ಹೊಸಂಗಡಿ ನಿವಾಸಿಯೊಬ್ಬರ ಹೆಸರಲ್ಲಿ ತಾತ್ಕಾಲಿಕ ನೋಂದಣಿ ಹೊಂದಿರುವ ಹೊಸ ವಾಹನ ಇದಾಗಿದ್ದು, ಚಾಲನಾ ತರಬೇತಿಗಾಗಿ ಯುವಕರನ್ನು ಹೊಂದಿದ್ದ ತಂಡ ಗುರುವಾರ ಮಧ್ಯಾಹ್ನ ಪಚ್ಚಂಬಳ ಮೈದಾನಕ್ಕೆ ತಲುಪಿತ್ತು. ಅಭ್ಯಾಸ ಸಂಚಾರ ನಡೆಸುವಾಗ ಬೆಂಕಿ ಕಾಣಿಸಿಕೊಂಡಿದೆ. ವಾಹನದಲ್ಲಿದ್ದವರು ಕೆಳಗಿಳಿದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ತಕ್ಷಣ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಶಮನಗೊಳಿಸಿದರೂ, ವಾಹನ ಸಂಪೂರ್ಣ ಉರಿದು ನಾಶವಾಗಿದೆ.