ಕರಾವಳಿಯ ಕಲಾವಿದರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ದೊಡ್ಡ ಸಾಧನೆ

ರಾಷ್ಟ್ರೀಯ 72ನೇ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾದ ರೂಪಶ್ರೀ ವರ್ಕಾಡಿ, ಶಿವಧ್ವಜ್ ಶೆಟ್ಟಿ, ಪ್ರಶಾಂತ್ ರೈ, ಡಾ.ಪ್ರದೀಪ್ ಕೆಂಚನೂರ್ ಹಾಗೂ ಬಾಲ ನಟ ಆತಿಶ್ ಎಸ್. ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಡಿಯೋನ್ ಮೊಂತೆರೋ, ಸುಮನಾ ಎಂ.ಡಿ. ಉಪಸ್ಥಿತರಿದ್ದರು.
ರಾಷ್ಟ್ರೀಯ 72ನೇ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾದ ರೂಪಶ್ರೀ ವರ್ಕಾಡಿ, ಶಿವಧ್ವಜ್ ಶೆಟ್ಟಿ, ಪ್ರಶಾಂತ್ ರೈ, ಡಾ.ಪ್ರದೀಪ್ ಕೆಂಚನೂರ್ ಹಾಗೂ ಬಾಲ ನಟ ಆತಿಶ್ ಎಸ್. ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಡಿಯೋನ್ ಮೊಂತೆರೋ, ಸುಮನಾ ಎಂ.ಡಿ. ಉಪಸ್ಥಿತರಿದ್ದರು.
Published on
ಮಂಗಳೂರು: ಮಂಗಳೂರಿನಲ್ಲಿ ಕಟ್ಟಡಗಳನ್ನು ನಿರ್ಮಿಸುವುದು, ಐಟಿ ಕ್ಷೇತ್ರವನ್ನು ಬೆಳೆಸುವುದು ಮಾತ್ರ ಸಾಕಾಗುವುದಿಲ್ಲ. ಸಿನಿಮಾ ನಗರ ನಿರ್ಮಿಸಿ ಚಲನಚಿತ್ರೋದ್ಯಮವನ್ನು ಬೆಳೆಸುವ ಕೆಲಸವೂ ಆಗಬೇಕು. ಕರಾವಳಿಯ ಸಿನಿಮಾ ಕಲಾವಿದರು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗಿರುವುದು ದೊಡ್ಡ ಸಾಧನೆ ಎಂದು ರೋಹನ್ ಕಾರ್ಪೋರೇಶನ್‌ನ ನಿರ್ದೇಶಕ ಡಿಯೋನ್ ಮೊಂತೆರೋ ಹೇಳಿದರು.
ಬಿಜೈ ರೋಹನ್ ಸಿಟಿಯಲ್ಲಿ ಶನಿವಾರ ಆಯೋಜಿಸಿದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಹಾಗೂ ಶಾರುಖ್‌ಖಾನ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿಮ್ಮೆಲ್ಲರ ಸಹಕಾರದಿಂದಲೇ ಶಾರುಖ್ ಖಾನ್ ಅವರನ್ನು ಮಂಗಳೂರಿಗೆ ಕರೆತರಲು ಸಾಧ್ಯವಾಯಿತು. ಈ ಕಾರ್ಯಕ್ರಮದ ಯಶಸ್ಸು ರೋಹನ್ ಕಾರ್ಪೊರೇಷನ್ ತಂಡಕ್ಕೆ ಅಪಾರ ತೃಪ್ತಿ ತಂದಿದೆ. ಇದಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ರಾಷ್ಟ್ರ ಮಟ್ಟದ ಚಲನಚಿತ್ರ ಪ್ರಶಸ್ತಿ ಪಡೆದ ಕರಾವಳಿಯ ಕಲಾವಿದರಾದ ರೂಪಶ್ರೀ ವರ್ಕಾಡಿ, ಶಿವಧ್ವಜ್ ಶೆಟ್ಟಿ, ಪ್ರಶಾಂತ್ ರೈ, ಡಾ.ಪ್ರದೀಪ್ ಕೆಂಚನೂರ್ ಹಾಗೂ ಬಾಲ ನಟ ಆತಿಶ್ ಎಸ್. ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ರೋಹನ್ ಕಾರ್ಪೊರೇಶನ್‌ನ ಜನರಲ್ ಮ್ಯಾನೇಜರ್ ಸುಮನಾ ಎಂ.ಡಿ. ಉಪಸ್ಥಿತರಿದ್ದರು. ಲವಿಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಕಲಾವಿದರಿಗೆ ಪ್ರೇರಣೆ
ಚಿತ್ರರಂಗದಲ್ಲಿ ಪ್ರಶಸ್ತಿ ಪಡೆಯಲು ಒಬ್ಬನ ಶ್ರಮ ಸಾಕಾಗುವುದಿಲ್ಲ. ತಂಡದ ಪರಿಶ್ರಮವಿದೆ. ರೋಹಣ್ ಕಾರ್ಪೊರೇಶನ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರನ್ನು ಗುರುತಿಸಿ ಅಭಿನಂದನೆ ಸಲ್ಲಿಸಿರುವುದು ಬಹಳಷ್ಟು ಕಲಾವಿದರಿಗೆ ಸಾಧನೆ ಮಾಡಲು ಪ್ರೇರಣೆಯಾಗಲಿದೆ. ರೋಹನ್ ಮೊಂತೆರೋ ಹಾಗೂ ಅವರ ತಂಡ ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹ ಅವರ ದೊಡ್ಡ ಗುಣ ಎಂದು ನಟ, ನಿರ್ದೇಶಕ ಶಿವಧ್ವಜ ಶೆಟ್ಟಿ ಹೇಳಿದರು.
ತುಳುನಾಡಿಗೆ ಅರ್ಪಣೆ
ಎಲ್ಲರ ಆಶೀರ್ವಾದದಿಂದ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ತುಳುನಾಡಿಗೆ ಅರ್ಪಿಸುತ್ತೇನೆ. ರೋಹನ್ ಕಾರ್ಪೋರೇಶನ್ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುತ್ತಾ, ಅವರ ಬೆಳವಣಿಗೆಗೆ ಬೆಂಬಲ ನೀಡುವ ಸಂಸ್ಥೆಯಾಗಿದೆ ಎಂದು ನಟಿ ರೂಪಶ್ರೀ ವರ್ಕಾಡಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net