ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ: ಅರ್ಹ ರೈತರಿಗೆ 2ರಿಂದ 5 ಲಕ್ಷ ರೂ. ನಗದು ಬಹುಮಾನ

milk new
Published on

ನವದೆಹಲಿ: ಕೇಂದ್ರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು 2022ನೇ ಸಾಲಿನ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

https://awards.gov.in ಪೋರ್ಟಲ್​ನಲ್ಲಿ ಸೆಪ್ಟೆಂಬರ್​ ಕೊನೇವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ವರ್ಷದ "ರಾಷ್ಟ್ರೀಯ ಕ್ಷೀರ ದಿನ''ವಾದ ನವೆಂಬರ್​ 26ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ದೇಶೀಯ ಹಸು/ಎಮ್ಮೆ ತಳಿ ಸಾಕುವ ಉತ್ತಮ ರೈತ, ಉತ್ತಮ ಕೃತಕ ಗರ್ಭಧಾರಣೆ ತಂತ್ರಜ್ಞ ಮತ್ತು ಉತ್ತಮ ಡೇರಿ ಸಹಕಾರಿ ಸಂಘ/ಡೇರಿ ರೈತ ಉತ್ಪಾದನಾ ಸಂಸ್ಥೆ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಮೂರು ವಿಭಾಗಗಳ ಪ್ರಶಸ್ತಿ ಅನುಕ್ರಮವಾಗಿ 5 ಲಕ್ಷ ರೂಪಾಯಿ, 3 ಲಕ್ಷ ರೂಪಾಯಿ ಹಾಗೂ 2 ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net