

ಬೆಂಗಳೂರಿನ ಕೊಮ್ಮಘಟದಲ್ಲಿ ಬೃಹತ್ ಸಮಾವೇಶ ಮುಗಿಸಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಂವಾದ ನಡೆಸಿದರು. ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಮೋದಿ ಅವರು ವೇದಿಕೆಗೆ ಆಗಮಿಸುತಿದ್ದಂತೆ ಜನರ ಹರ್ಷೋದ್ಘಾರ ಮೇಳೈಸಿತ್ತು. ಮೋದಿ.. ಮೋದಿ.. ಭಾರತ್ ಮಾತಾಕಿ ಜೈ.. ವಂದೇ ಮಾತರಂ... ಘೋಷ ವಾಕ್ಯಗಳು ಜೋರಾಗಿ ಮೊಳಗಿತು. ಪ್ರಧಾನಿಗೆ ಮೈಸೂರು ಪೇಟ ತೊಡಿಸಿ ಸಿಎಂ ಗೌರವಿಸಿದರು.