ಕೃಷಿ ಹೊಂಡದಲ್ಲಿ ಮುಳುಗಿ ಮೈಸೂರಿನ ಯುವಕ ಸಾವು

Goutham Gowda (Death news)
Published on

ಮೈಸೂರು: ಕೋಲಾರ ಜಿಲ್ಲೆಯ ನಾಗನಾಳ ಗ್ರಾಮದಲ್ಲಿ ಕೃಷಿಹೊಂಡದಲ್ಲಿ ಈಜಲು ತೆರಳಿದ್ದ ಜಿಲ್ಲೆಯ ಯುವಕ ಮುಳುಗಿ ಮೃತಪಟ್ಟಿದ್ದಾರೆ.

ನಗರದ ರಾಘವೇಂದ್ರನಗರ ಬಡಾವಣೆ ನಿವಾಸಿ ಗೌತಮ್ ಗೌಡ (26) ಮೃತ ದುರ್ದೈವಿ. ಗೌತಮ್ ನಗರದ ಮಾಲ್ ಆಫ್ ಮೈಸೂರಿನಲ್ಲಿರುವ ಕೆಎಫ್‌ಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತಮ್ಮ ತಂದೆಯ ಊರಾದ ಕೋಲಾರ ಜಿಲ್ಲೆ ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ತೆರಳಿದ್ದ ಗೌತಮ್ ಸ್ನೇಹಿತರೊಂದಿಗೆ ಕೃಷಿಹೊಂಡದಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟರು. ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಸ್ವಗ್ರಾಮ ನಾಗನಾಳ ಗ್ರಾಮದಲ್ಲಿ ನಡೆಯಲಿದೆ. ಮೃತರು ತಂದೆ ನಾರಾಯಣಸ್ವಾಮಿ, ತಾಯಿ ಕನಕ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net