ಏನವ್ವಾ ನಿನ್ನ ರಂಪಾಟ? ಮೈಸೂರಲ್ಲಿ ಆಟೋ ಚಾಲಕನಿಗೆ ಅವಾಚ್ಯವಾಗಿ ನಿಂದಸಿದ ಮಹಿಳಾ ಪಿಎಸ್​ಐ: ವಿಡಿಯೋ ವೈರಲ್​

psi yasmin
Published on

ಮೈಸೂರು: ಈ ಹಿಂದೆ ನಂಜನಗೂಡಿನ ಪೆಟ್ರೋಲ್​ ಬಂಕ್​ನಲ್ಲಿ ತಮ್ಮ ಜೀಪ್​ಗೆ ಡೀಸೆಲ್​ ಹಾಕಿಲ್ಲ ಎಂದು ರಂಪಾಟ ಮಾಡಿ ಪೆಟ್ರೋಲ್​ ಬಂಕ್​ ಸುಟ್ಟು ಹಾಕುತ್ತೇನೆ ಎಂದು ಹೇಳುವ ಮೂಲಕ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದ ಮಹಿಳಾ ಸಬ್​ ಇನ್​ಸ್ಪೆಕ್ಟರ್​ ಯಾಸ್ಮಿನ್​ ತಾಜ್​ ಈಗ ಮತ್ತೊಂದು ಕಿರಿಕ್​ ಮಾಡಿಕೊಂಡಿದ್ದಾರೆ.

ಅಪಘಾತವಾಗಿದ್ದನ್ನೇ ನೆಪವಾಗಿಟ್ಟುಕೊಂಡು ಸಾರ್ವಜನಿಕವಾಗಿಯೇ ಆಟೋ ಚಾಲಕನಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಈ ದೃಶ್ಯ ಜಾಲತಾಣದಲ್ಲಿ ವೈರಲ್​ ಅಗಿದೆ.

ಮೈಸೂರು ನಗರದ ಎಸ್​ಪಿ ಕಚೇರಿ ವೃತ್ತದ ಬಳಿ ಯಾಸ್ಮಿನ್​ ತಾಜ್​ ಸ್ಕೂಟರ್​ನಲ್ಲಿ ತೆರಳುತ್ತಿದ್ದಾಗ ಆಟೋವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಸಾರ್ವಜನಿಕವಾಗಿಯೇ ಚಾಲಕನ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್​ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net