ಕೆರೆಗೆ ಹಾರಿ ಪೊಲೀಸ್​ ಪೇದೆ ಆತ್ಮಹತ್ಯೆ

suicide
Published on

ಮೈಸೂರು: ಕೆರೆಗೆ ಹಾರಿ ಪೊಲೀಸ್​ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ನಗರ ಶಸ್ತ್ರಾಸ್ತ್ರ ಮೀಸಲು ಪಡೆಯ ಪೇದೆ ಮೋಹನ್ ಎಂ. ಮೃತರು. 2008ನೇ ಬ್ಯಾಚ್​ನ ಸಿಬ್ಬಂದಿಯಾದ ಮೋಹನ್​, ಬಾಂಬ್ ಸ್ಕ್ವಾಡ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೈಸೂರು ತಾಲೂಕಿನ ವರುಣ ಕೆರೆ ಸಮೀಪ ಬೈಕ್​ ನಿಲ್ಲಿಸಿ, ಬಳಿಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net