

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಹಂಗಾಮಿ ಮೇಯರ್ ಅನ್ವರ್ಗೆ ಅದೃಷ್ಟದ ಮೇಲೋಂದು ಅದೃಷ್ಟ ಒಲಿದಿದ್ದು, ಮೇಯರ್ ಆಕಾಂಕ್ಷಿಗಳಾಗಿದ್ದ ಶಾಂತಕುಮಾರಿ ಮತ್ತು ಸುನಂದಾ ಪಾಲನೇತ್ರಾ ಪಾಲಿಗೆ ಕಹಿಯಾಗಿ ಪರಿಣಮಿಸಿದೆ.
ಕೋವಿಡ್- 19 ಹಿನ್ನೆಲೆಯಲ್ಲಿ ಆರು ತಿಂಗಳು ಕಾಲ ಸ್ಥಳೀಯ ಸಂಘ-ಸಂಸ್ಥೆಗಳ ಚುನಾವಣೆ ನಡೆಸದಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಸ್ಥಳೀಯ ಸಂಘ-ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೇಯರ್ ಚುನಾವಣೆ ಬರಲಿದ್ದು, ಮುಂದಿನ ಆರು ತಿಂಗಳವರೆಗೂ ಹಂಗಾಮಿ ಮೇಯರ್ ಆಗಿ ಅನ್ವರ್ ಮುಂದುವರಿಯಲಿದ್ದಾರೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಮಹತ್ವದ ಆದೇಶ ಹೊರಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)