ಮೈಸೂರಲ್ಲಿ ಗುರುಕುಲದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮ್ಯಾನೇಜರ್​ ಬಂಧನ

rape-4
Published on

ಮೈಸೂರು: ಮೈಸೂರಿನ ಪ್ರತಿಷ್ಠಿತ ಗುರುಕುಲದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಮ್ಯಾನೇಜರ್ ಗಿರೀಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಗುರುಕುಲದಲ್ಲಿ 15 ವರ್ಷಗಳಿಂದ ಮ್ಯಾನೇಜರ್ ಕೆಲಸ ಮಾಡುತ್ತಿದ್ದ ಗಿರೀಶ್, ಹಾಸ್ಟೆಲ್‌ನ ಇಬ್ಬರು ಹೆಣ್ಣು ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಲೈಂಗಿಕ ದೌರ್ಜನ್ಯವೆಸಗಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗುರುಕುಲ ಹಾಸ್ಟೆಲ್​ನಲ್ಲಿ ಸದ್ಯ 17 ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ಇಬ್ಬರ ಮೇಲೆ ಮ್ಯಾನೇಜರ್​ ದೌರ್ಜನ್ಯವೆಸಗುತ್ತಿದ್ದ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಸಹ ಶಿಕ್ಷಕರೊಬ್ಬರು ದೂರು ನೀಡಿದ್ದಾರೆ. ಗಿರೀಶ್ ವಿರುದ್ಧ ಹೆಬ್ಬಾಳ ಠಾಣೆಗೆ ಸಮಿತಿಯು ದೂರು ನೀಡಿದ್ದು, ಪೋಸ್ಕೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net