

ಮೈಸೂರು: ಸುಸೂತ್ರವಾಗಿ ನಡೆದ ನಾಡಹಬ್ಬ ದಸರಾಗೆ ಶುಕ್ರವಾರ ಸಂಜೆ ತೆರೆಬಿದ್ದಿದೆ. ಇದರ ಬೆನ್ನಲ್ಲೇ ಮೈಸೂರಲ್ಲಿ 10ನೇ ಚಾಮರಾಜ ಒಡೆಯರ್ರ ಪ್ರತಿಮೆ ಹಾನಿಯಾಗಿರುವ ಸುದ್ದಿ ಬಂದಿದೆ.
ಮೈಸೂರಿನ ಚಾಮರಾಜ ಒಡೆಯರ್ ಸರ್ಕಲ್ನಲ್ಲಿ ಅಮೃತ ಶಿಲೆಯಲ್ಲಿ ನಿರ್ಮಾಣವಾದ 10ನೇ ಚಾಮರಾಜ ಒಡೆಯರ್ರ ಪ್ರತಿಮೆ ಇದೆ.
ನಿನ್ನೆ ದಸರಾ ಜಂಬೂ ಸವಾರಿ ವೀಕ್ಷಣೆಗೆಂದು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಲ್ಲಿ ಜನಸ್ತೋಮ ಸೇರಿತ್ತು. ಪ್ರತಿಮೆ ಬಳಿಯೂ ಜನ ಕಿಕ್ಕಿರಿದು ನಿಂತಿದ್ದರು. ಈ ವೇಳೆ ಚಾಮರಾಜ ಒಡೆಯರ್ ಪ್ರತಿಮೆಯ ಖಡ್ಗ ಮುರಿದಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಈ ಹಿಂದೆ ಕೂಡ ಪತ್ರಿಯಿಂದ ಕತ್ತಿ ಕಳಚಿ ಜೋಡನೆ ಮಾಡಲಾಗಿತ್ತು. ಇದೀಗ ಮತ್ತೆ ಮುರಿದಿದೆ.