

ಮೈಸೂರು: ಶಾಲಾ ಆವರಣದಲ್ಲೇ ಶಾಲಾ ಬಸ್ ಧಗಧಗನೆ ಹೊತ್ತಿ ಉರಿದ ಘಟನೆ ಪಿರಿಯಾಪಟ್ಟಣದ ಡಿಟಿಎಂಎನ್ ಶಾಲೆಯಲ್ಲಿ ಸಂಭವಿಸಿದೆ.
ಬುಧವಾರ ಮಧ್ಯಾಹ್ನ ಶಾಲೆಯಿಂದ ಮಕ್ಕಳನ್ನು ಬಸ್ನಲ್ಲಿ ಕರೆದೊಯ್ದ ಚಾಲಕ, ವಿದ್ಯಾರ್ಥಿಗಳನ್ನ ಅವರವರ ಮನೆ ಬಳಿ ಬಿಟ್ಟು ವಾಪಸ್ ಬಂದಿದ್ದ. ಖಾಲಿ ಬಸ್ ಅನ್ನು ಆವರಣದಲ್ಲಿ ನಿಲ್ಲಿಸಿ ಚಾಲಕ ಶಾಲೆಯ ಒಳಗೆ ಹೋದ ಕಲವೇ ಸಮಯದಲ್ಲಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಗೆಯಲ್ಲಿ ಬಸ್ ಸುಟ್ಟು ಕರಕಲಾಗಿದೆ.
ಪಕ್ಕದಲ್ಲೇ ಇದ್ದ ಮೂರ್ನಾಲ್ಕು ಶಾಲಾ ಬಸ್ಗಳಿಗೂ ಭಾಗಶಃ ಬೆಂಕಿ ತಗುಲಿದೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಿದ್ದಾರೆ. ಬೆಂಕಿ ಅವಘಡ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು.