ಗಂಡನ ಆ ಒಂದು ವಿರೋಧಕ್ಕೆ ನೊಂದು ಮಗು ಜತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ!

sucide (2)
Published on

ಮಂಡ್ಯ: ಕಾವೇರಿ ನದಿಗೆ ಜಿಗಿದು 6 ವರ್ಷದ ಮಗಳ ಜತೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಂಗಪಟ್ಟಣದ ಘೋಸಾಯಿ ಘಾಟ್ ಬಳಿ ಸಂಭವಿಸಿದೆ.

ಮೈಸೂರಿನ ಹೌಸಿಂಗ್ ಬೋರ್ಟ್ ನಿವಾಸಿಗಳಾದ ಭಾರ್ಗವಿ(31) ಮತ್ತು ಇವರ ಮಗಳು ದೀಕ್ಷಾ(6) ಮೃತ ದುರ್ದೈವಿಗಳು. ಶುಕ್ರವಾರ ಬೆಳಗ್ಗೆ ಮಗಳ ಜತೆ ಮನೆ ಬಿಟ್ಟಿದ್ದ ಭಾರ್ಗವಿ, ವಾಪಸ್​ ಮನೆಗೆ ಬಂದಿರಲಿಲ್ಲ.

ಘೋಸಾಯಿ ಘಾಟ್ ಬಳಿ ಭಾರ್ಗವಿಯ ಮೊಬೈಲ್ ಮತ್ತು ಬ್ಯಾಗ್ ಪತ್ತೆಯಾಗಿತ್ತು. ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶನಿವಾರ ಬೆಳಗ್ಗೆ ಶೋಧ ಕಾರ್ಯಾಚರಣೆ ನಡೆಸಿದಾಗ ತಾಯಿ-ಮಗಳ ಮೃತದೇಹ ಪತ್ತೆಯಾಗಿದೆ.

ಭಾರ್ಗವಿ ಕೆಲಸಕ್ಕೆ ಸೇರಬೇಕು ಅಂದುಕೊಂಡಿದ್ದಳು. ಆದರೆ, ಇದಕ್ಕೆ ಪತಿ ಪ್ರವೀಣ್ ಕುಮಾರ್ ಒಪ್ಪಿಗೆ ಕೊಟ್ಟಿರಲಿಲ್ಲವಂತೆ. ಈ ಬಗ್ಗೆ ಸಂಬಂಧಿಕರೊಂದಿಗೂ ಭಾರ್ಗವಿ ಹೇಳಿಕೊಂಡಿದ್ದಳು. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net