ಮುಸ್ಲಿಂ ಧರ್ಮ ಗುರುವಿನ ಕೃಷಿ ಪ್ರೀತಿ

ಸೇನಾಪತಿಹಳ್ಳಿ ಗ್ರಾಮದ ಬಳಿಯಲ್ಲಿರುವ ಜಮೀನಿನಲ್ಲಿ ಶೇಖ್‌ವಲಿ ಅಹಮದ್ ಬೆಳೆದಿರುವ ವಿವಿಧ ಜಾತಿಯ ಮಾವು.
ಸೇನಾಪತಿಹಳ್ಳಿ ಗ್ರಾಮದ ಬಳಿಯಲ್ಲಿರುವ ಜಮೀನಿನಲ್ಲಿ ಶೇಖ್‌ವಲಿ ಅಹಮದ್ ಬೆಳೆದಿರುವ ವಿವಿಧ ಜಾತಿಯ ಮಾವು.
Published on

ಬನ್ನೂರು: ಸುಮಾರು ಒಂದೂವರೆ ವರ್ಷದ ಅವಧಿಯಲ್ಲಿಯೇ ವಿವಿಧ ಜಾತಿಯ ಮರಗಳು, ಔಷಧ ಸಸ್ಯಗಳು, ವಿವಿಧ ಹಣ್ಣಿನ ಗಿಡಗಳು, ರಕ್ತಚಂದನ, ಶ್ರೀಗಂಧ, ದೇವದಾರು, ಬೀಟೆ, ಹಲಸು... ಹೀಗೆ ನಾನಾ ಬೆಳೆ ಬೆಳೆಯುವ ಮೂಲಕ ಮುಸ್ಲಿಂ ಧರ್ಮಗುರು ಶೇಖ್‌ವಲಿ ಅಹಮದ್ ಇತರರಿಗೆ ಮಾದರಿಯಾಗಿದ್ದಾರೆ.

ಮೂಲತಃ ಕೋಲಾರ ಜಿಲ್ಲೆಯವರಾದ ಶೇಖ್‌ವಲಿ ಸಮೀಪದ ಸೇನಾಪತಿಹಳ್ಳಿ ಗ್ರಾಮದಲ್ಲಿ 1.20 ಎಕರೆ ಭೂಮಿ ಖರೀದಿಸಿ ಇದೀಗ ಕೃಷಿಯಲ್ಲಿ ಯಶಸ್ಸು ಕಾಣುವ ಮೂಲಕ ಯುವ ರೈತರಿಗೆ ಮಾದರಿಯಾಗಿದ್ದಾರೆ. ಇಟಾಲಿಯನ್, ಅಮೆರಿಕನ್ ಆ್ಯಪಲ್, ಗ್ರೀನ್ ಆ್ಯಪಲ್, ಅನ್ನ ಸೇಬು, ಹರ್ಮನ್99, ಡಾರ್ಸೇಟ್ ಗೋಲ್ಡನ್ ಸೇರಿದಂತೆ 6 ರೀತಿಯ ಸೇಬಿನಗಿಡಗಳನ್ನು ಹಾಕಿದ್ದು ಇದೀಗ ಹಣ್ಣು ಬಿಡಲು ಆರಂಭಿಸಿದೆ. ಇದರೊಂದಿಗೆ ವಿವಿಧ ರೀತಿಯ ಮಾವಿನ ಫಸಲನ್ನೂ ಬೆಳೆದಿದ್ದಾರೆ. ಇನ್ನು ಕಪ್ಪು ಬಣ್ಣದ ಸೀಬೆಹಣ್ಣು ದೊರೆಯುತ್ತಿದ್ದು, ವಿದೇಶಿ ತಳಿಯ ವಿವಿಧ ಜಾತಿಯ ಸೀಬೆ ಹಣ್ಣಿನ ಮರಗಳನ್ನು ಬೆಳೆದಿರುವ ಇವರು, ವಾರ್ಷಿಕವಾಗಿ ಇವುಗಳಿಂದ ಆದಾಯವನ್ನೂ ಪಡೆಯುತ್ತಿದ್ದಾರೆ.

ಈ ನಡುವೆ ಕಾಫಿ ಗಿಡಗಳೊಂದಿಗೆ ಖರ್ಜೂರ, ಅಂಜೂರ, ಏಲಕ್ಕಿ, ಚಕ್ಕೆ ಗಿಡಗಳು, ಶ್ರೀಲಂಕಾದ ಚಕ್ಕೆಯ ಗಿಡಗಳನ್ನು ಬೆಳೆದಿರುವುದು ಮತ್ತೊಂದು ವಿಶೇಷ. ಮರದ ಸೇಬು, ವಾಟರ್ ಫ್ರೂಟ್, ನೇರಳೆ, ನಿಂಬೆ, ಗಜನಿಂಬೆ..ಹೀಗೆ ನಾನಾ ರೀತಿಯ ಹಣ್ಣಿನ ಗಿಡಗಳನ್ನೂ ಬೆಳೆದಿದ್ದಾರೆ. ಅಲ್ಲಲ್ಲಿ ಕಪ್ಪು ಮೆಣಸು ಗಿಡಗಳೂ ಕಂಡುಬರುತ್ತದೆ.

ಅಮೆಜಾನ್ ದೇಶದ್ದು ಎನ್ನಲಾಗುವ ಜಬೋಟಿಕಾಬಾ ಎನ್ನುವ ಗಿಡ ಇವರ ಬಳಿಯಿದೆ. 3 ವರ್ಷದ ನಂತರ 1.5 ಟನ್ ಅಷ್ಟು ಜಬೋಟಿಕಬಾ ಎನ್ನುವ ಹಣ್ಣು ದೊರೆಯುತ್ತದೆ ಎನ್ನುತ್ತಾರೆ. ಇದರೊಂದಿಗೆ ಕ್ಯಾನ್ಸರ್ ನಿರ್ಮೂಲನೆ ಮಾಡುವ ನಾನಾ ಬಗೆಯ ಗಿಡಗಳು ಇವರ ಬಳಿಯಿದ್ದು, ಅನೇಕ ಕಡೆಗಳಿಂದ ಬೇಡಿಕೆ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net