ಚಿ.ಉದಯಶಂಕರ್‌ಗೆ ಸಂಗೀತ ನಮನ

music programme
Published on

ಮೈಸೂರು: ಆರಭಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನ.25ರ ಸಂಜೆ 5 ಗಂಟೆಗೆ ನಗರದ ಕಲಾಮಂದಿರದಲ್ಲಿ ‘ಉದಯಗಾನ’ ಚಿ.ಉದಯಶಂಕರ್ ಅವರಿಗೆ ಸಂಗೀತ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ.


ನಟ, ನಿರ್ದೇಶಕ ಚಿ.ಗುರುದತ್, ಚಲನಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಭಾಗವಹಿಸಲಿದ್ದಾರೆ. ಚಿ.ಉದಯಶಂಕರ್ ರಚನೆಯ 18 ಹಾಡುಗಳನ್ನು ಹಾಡಲಾಗುತ್ತದೆ ಎಂದು ಟ್ರಸ್ಟ್‌ನ ಪದಾಧಿಕಾರಿ ಮಹೇಶ್‌ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪದಾಧಿಕಾರಿಗಳಾದ ಡಾ.ಸುನೀತಾ, ಎ.ಎಸ್.ಪ್ರಸನ್ನಕುಮಾರ್, ಡಾ. ಕುಲದೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net