ಮುರುಘಾ ಶರಣರು 4 ದಿನ ಪೊಲೀಸ್ ಕಸ್ಟಡಿಗೆ

Shivamurthy Murugha Sharanaru
Published on

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ನೀಡಿದೆ.

ಶುಕ್ರವಾರ ಮಧ್ಯಾಹ್ನ ಕೋರ್ಟ್​ಗೆ ಶ್ರೀಗಳನ್ನು ಕರೆತರಲಾಯಿತು. ಸಿಆರ್​ಪಿಸಿ ಸೆಕ್ಷನ್ 41 D ಅಡಿಯಲ್ಲಿ ತನಿಖಾಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಗೆ ಶ್ರೀಗಳ ಪರ ವಕೀಲರು ತಕರಾರು ಅರ್ಜಿ ಹಾಕಿರಲಿಲ್ಲ.

ತನಿಖಾಧಿಕಾರಿಗಳ ಅರ್ಜಿ ಪುರಸ್ಕರಿಸಿ ಪೊಲೀಸ್ ಕಸ್ಟಡಿಗೆ ಮುರುಘಾ ಶರಣರನ್ನು ಒಪ್ಪಿಸಿ 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶೆ ಕೋಮಲಾ ಆದೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net