ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ಕೋಮುಗಲಭೆ ಆಗಿಲ್ಲ, ಕುರ್ಚಿಗೋಸ್ಕರ ಬೆಂಕಿ ಹಚ್ಚಿದ್ದು ಕಾಂಗ್ರೆಸ್​: ರೇಣುಕಾಚಾರ್ಯ

renukacharya
Published on

ತುಮಕೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದುವರೆಗೂ ಒಂದೇ ಒಂದು ಕೋಮುಗಲಭೆ ಆಗಿಲ್ಲ. ಕುರ್ಚಿಗೋಸ್ಕರ ಬೆಂಕಿ ಹಚ್ಚಿದ್ದು ಕಾಂಗ್ರೆಸ್​. ನಮ್ಮದು ದೀಪ ಹಚ್ಚೋ ಸಂಸ್ಕೃತಿ. ಕಾಂಗ್ರೆಸ್​ನವರದ್ದು ಕೊಳ್ಳಿ ಇಡೋ ಸಂಸ್ಕೃತಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಬುಧವಾರ ರಾತ್ರಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಕಾಂಗ್ರೆಸ್ ಹಾಗೂ ಆರ್​ಎಸ್​ಎಸ್ ಬಗ್ಗೆ ಹುಚ್ಚುಚ್ಚಾಗಿ ಹೇಳಿಕೆ ನೀಡುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಾಲಿಬಾನಿಗಳಂತೆ ವರ್ತಿಸುತ್ತಿದ್ದಾರೆ‌. ನೀವು ತಾಲಿಬಾನಿಗಳು. ನಿಮ್ಮ ಭಾಷೆ, ನಿಮ್ಮ ನಡವಳಿಕೆಗೆ ದೇಶದ ಜನರೇ ತಕ್ಕ ಪಾಠ ಕಲಿಸುತ್ತಾರೆ‌ ಎಂದು ಹರಿಹಾಯ್ದರು.

ಭಾರತೀಯ ಜನತಾ ಪಾರ್ಟಿ ಮತ್ತು ಸಂಘ ಪರಿವಾರ ಹಿಂದುತ್ವ, ದೇಶದ ಸಂಸ್ಕೃತಿಯನ್ನ ಉಳಿಸುವಂತ ಕಾರ್ಯ ಮಾಡುತ್ತಿವೆ. ದೇಶಲ್ಲಿ ಎಲ್ಲೇ ವಿಪತ್ತು, ಆಪತ್ತು ಬಂದ್ರೂ ಮೊದಲು ಎದೆ ಕೊಟ್ಟು ನಿಲ್ಲುವುದೇ ಸಂಘ ಪರಿವಾರ. ಐಎಎಸ್, ಕೆಎಎಸ್ ಮಾಡೋರಿಗೆ ಆರ್​ಎಸ್ಎಸ್​ನಿಂದ ಇನ್​ಫ್ಲೂಯೆನ್ಸ್ ಮಾಡೋಕಾಗುತ್ತಾ? ಅವರವರ ಅರ್ಹತೆ, ಅಂಕಗಳ ಮೇಲೆ ಅವಕಾಶ ಸಿಗುತ್ತೆ. ಕುಮಾರಸ್ವಾಮಿ ಆಕಸ್ಮಿಕವಾಗಿ ಎರಡು ಬಾರಿ ಸಿಎಂ ಆದವರು. ಕುಮಾರಸ್ವಾಮಿಗೆ ಈಗ ಅಧಿಕಾರ ಇಲ್ಲ, ಹತಾಶಾ ಮನೋಭಾವದಿಂದ ಮಾತನಾಡುತ್ತಿದ್ದು, ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net