ಬ್ರದರ್ ಬ್ರದರ್... ಎನ್ನುವ ಕೈ ನಾಯಕ ಈಗ ಯಾವ ಬಿಲದಲ್ಲಿ ಅಡಗಿದ್ದಾರೆ? ಕನ್ಹಯ್ಯ ಹತ್ಯೆ ಖಂಡಿಸಿ ಪ್ರತಾಪ್​​ ಸಿಂಹ ತರಾಟೆ

pratapa simha- siddaramaiah
Published on

ಮೈಸೂರು: ದನಗಳ್ಳರಿಗೆ ಎರಡೇಟು ಬಿದ್ದರೆ ಆಕಾಶ-ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಬ್ರದರ್ ಬ್ರದರ್ ಎಂದು ಹೇಳುವ ಕಾಂಗ್ರೆಸ್ ನಾಯಕ ಈಗ ಯಾವ ಬಿಲದಲ್ಲಿ ಅಡಗಿದ್ದಾರೆ? ಟ್ವೀಟ್ ಮಾಡಿ ಮನೆಯೊಳಗೆ ಕುಳಿತರೆ ಮುಗೀತಾ ನಿಮ್ಮ ಕೆಲಸ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್​ ಸಿಂಹ ಕಿಡಿಕಾರಿದ್ದಾರೆ.

ಪ್ರವಾದಿ ಮುಹಮ್ಮದ್​ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಬಿಜೆಪಿ ನಾಯಕಿ ನೂಪುರ್​ ಶರ್ಮಾರನ್ನು ಬೆಂಬಲಿಸಿ, ಪೋಸ್ಟ್​ ಹಾಕಿದ್ದ ಹಿಂದು ವ್ಯಕ್ತಿ ಕನ್ಹಯ್ಯ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದು, ಇಡೀ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಹಿಂದು ವ್ಯಕ್ತಿ ಹತ್ಯೆಯಾದರೂ ರಾಜ್ಯ ಕಾಂಗ್ರೆಸ್​ ನಾಯಕರು ಸುಮ್ಮನಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಪ್ರತಾಪ್​ ಸಿಂಹ, ಕರ್ನಾಟಕದಲ್ಲೂ ಕಾಂಗ್ರೆಸ್​ಗೆ ಅಧಿಕಾರ ಕೊಟ್ಟರೆ ರಾಜಸ್ಥಾನದ ಘಟನೆ ಇಲ್ಲಿಯೂ ಆಗುತ್ತೆ. ಇದು ಕರ್ನಾಟಕದ ಜನರಿಗೆ ಎಚ್ಚರಿಕೆ ಗಂಟೆ. ಟಿಪ್ಪು ಸಂತತಿಗಳ ಬಗ್ಗೆ ಮತದಾರರು ಜಾಗೃತರಾಗಿರಬೇಕು. ರಾಜಸ್ಥಾನ ಸರ್ಕಾರದ ಮೇಲೆ ನನಗೆ ವಿಶ್ವಾಸವಿಲ್ಲ. ಹಿಂದುಗಳ ಧ್ವನಿ ಅಡಗಿಸಲು ಈ ಕೃತ್ಯ ನಡೆದಿದೆ. ಇದರ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್​ನವರ ಮುಸ್ಲಿಂ ಓಲೈಕೆಯಿಂದ ಈ ರೀತಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

'ಸಿದ್ದರಾಮಯ್ಯ ಸರ್, ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ? ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಆದರೆ, ಭಯೋತ್ಪಾದಕರೆಲ್ಲಾ ಮುಸ್ಲಿಮರು. ಒಳ್ಳೆಯ ಮುಸ್ಲಿಮರು ಯಾಕೆ ಈಗ ಮಾತಾಡ್ತಿಲ್ಲ? ಒಳ್ಳೆಯ ಮುಸ್ಲಿಮರು ಮೌನವಾಗಿ ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರಾ? ಇನ್ನೂ ನೀವು ಧ್ವನಿ ಎತ್ತದಿದ್ದರೆ ನಿಮ್ಮ ಮೇಲೂ ಅನುಮಾನ ಮೂಡುತ್ತೆ. ಈಗ ಮೌಲಿಗಳು, ಮುಲ್ಲಾಗಳು ಎಲ್ಲಿ ಹೋಗಿದ್ದಾರೆ? ಈ ಕೊಲೆ ತಪ್ಪು ಅಂತಾ ಆರೋಪಿಗಳ ವಿರುದ್ಧ ಫತ್ವಾ ಹೊರಡಿಸಲಿ ನೋಡೋಣಾ? ಶುಕ್ರವಾರ ಪ್ರಾರ್ಥನೆಯಾದ ನಂತರ ಕಲ್ಲು ತೂರುವಂತೆ ಹೇಳುವುದು ನಿಮ್ಮ ಕೆಲಸವಾ? ಎಂದು ಪ್ರತಾಪ್​ ಸಿಂಹ ಕಿಡಿಕಾರಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net