

ವಿಜಯಪುರ: ಸತತ ಪ್ರಯತ್ನ ಮತ್ತು ತಂದೆ ತಾಯಿಯಿಂದ ಸಂಸತಿ&ಸಂಸ್ಕಾರ ಪಡೆದು ಯುಪಿಎಸ್ಸಿ ಪರೀೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ 100 ನೇ ರ್ಯಾಂಕ್ ಪಡೆದ ನಮ್ಮ ಜಿಲ್ಲೆಯ ವಿದ್ಯಾರ್ಥಿನಿ ವಿಜೇತಾ ಹೊಸಮನಿ ಕರ್ನಾಟಕಕ್ಕೆ ಮಾದರಿ ಎಂದು ದರಬಾರ ಕಾಲೇಜಿನ ಪ್ರಾಚಾರ್ಯ ಟಿ.ಆರ್. ಕುಲಕರ್ಣಿ ಹೇಳಿದರು.
ನಗರದ ಅನಂತಲಕ್ಷ್ಮೀ ಮಂಗಲ ಕಾರ್ಯಾಲಯದಲ್ಲಿ ಜಿಲ್ಲೆಯ ಬ್ರಾಹ್ಮಣ ಸಮಾಜ, ಭೀಮಸೇನ ಹೊಸಮನಿ ಗೆಳೆಯರ ಬಳಗ ಮತ್ತು ಅಭಿಮಾನಿಗಳಿಂದ ಗುರುವಾರ ಹಮ್ಮಿಕೊಂಡಿದ್ದ ಯುಪಿಎಸ್ಸಿ ಪರೀೆಯಲ್ಲಿ ಸಾಧನೆ ಮಾಡಿದ ವಿಜೇತಾ ಹೊಸಮನಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಯತ್ನವಿಲ್ಲದೆ ಯಾವುದೇ ವ್ಯಕ್ತಿಯೂ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಸತತ ಅಭ್ಯಾಸ ಪ್ರವೃತ್ತಿ ಮೈಗೂಡಿಸಿಕೊಂಡು ತಂದೆ ತಾಯಿಯಿಂದ ಸಂಸತಿ&ಸಂಸ್ಕಾರ ಪಡೆದು ಯುಪಿಎಸ್ಸಿಯಲ್ಲಿ ಸಾಧನೆಯ ಶಿಖರವೇರಿದ ವಿಜೇತಾ ಹೊಸಮನಿ ರಾಜ್ಯಕ್ಕೆ ಮಾದರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸೈನಿಕ ಶಾಲೆಯ ಪ್ರಾಚಾಯೆರ್ ಪ್ರತಿಭಾ ಭಿಷ್ಟ ಮಾತನಾಡಿ, ತಮ್ಮ ಸ್ವಂತ ಪ್ರತಿಭೆಯಿಂದ ವಿಜೇತಾ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಒಬ್ಬ ಹೆಣ್ಣು ಕಲಿತರೆ ಇಡೀ ಕುಟುಂಬವೇ ಕಲಿತಂತೆ. ತಂದೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಮನಾಗಿ ಕಾಣುವುದಿಲ್ಲ. ಆದರೆ, ತಾಯಿ ಈ ಭಿನ್ನತೆ ತೋರದೆ ಇರುವುದೇ ಹೆಣ್ಣಿನ ವಿಶೇಷ ಗುಣ. ವಿಜೇತಾ ಯಶಸ್ಸಿನಲ್ಲಿ ಅವರ ತಾಯಿಯ ಪಾತ್ರ ಅನನ್ಯ ಎಂದರು.
ಗಂವಾರ ಮಠದ ಸದ್ಗುರು ಸೋಪಾನನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶೈಲಜಾ ಪಾಟೀಲ ಮತ್ತು ಮಹಿಳಾ ವೃಂದದಿಂದ ವಿಜೇತಾ ಅವರನ್ನು ಸನ್ಮಾನಿಸಲಾಯಿತು. ಉಪ ಪೊಲೀಸ್ ಅಧೀಕ್ಷಕ ಬಿ.ಎಚ್. ತಳಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂವಾರದ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ವಿಜೇತಾ ಪಾಲಕರಾದ ಭೀಮಸೇನ ಹೊಸಮನಿ ಮತ್ತು ಶಶಿಕಲಾ ಹೊಸಮನಿ ವೇದಿಕೆಯಲ್ಲಿದ್ದರು.
ರಮೇಶ ದೇಶಪಾಂಡೆ, ವಿಶ್ವನಾಥ್ ಕುಲಕರ್ಣಿ, ಮುಕುಂದ ಕುಲಕರ್ಣಿ, ಮಿಲಿಂದ ಕುಲಕರ್ಣಿ, ಕಲ್ಯಾಣರಾವ ದೇಶಪಾಂಡೆ, ಡಾ. ಉಪೇಂದ್ರ ನರಸಾಪೂರ, ಡಾ. ವಿಲಾಸ್ ಕುಲಕರ್ಣಿ, ಅರುಣ ಸೋಲಾಪೂರಕರ, ಸುಧೀಂದ್ರ ಗುನಾಳಕರ್, ಸುರೇಶ ಕುಲಕರ್ಣಿ, ಶ್ಯಾಮ ಜೋಶಿ, ಅಂಬಾದಾಸ ಜೋಶಿ, ಉಲ್ಲಾಸ ಪಾಟೀಲ್ ಮತ್ತಿತರರಿದ್ದರು.
ಜಗದೀಶ್ ಗಲಗಲಿ, ಭಿಷ್ಟೇಶ್ ಪದಕಿ ನಿರೂಪಿಸಿದರು. ಭೀಮಸೇನ ಹೊಸಮನಿ ವಂದಿಸಿದರು.