

ಸುಳ್ಯ: ಮಗು ಹಟ ಮಾಡುತ್ತಿದೆ ಎಂದು ತಾಯಿಯೇ ಮಗುವಿಗೆ ಸಟ್ಟುಗ ಬಿಸಿ ಮಾಡಿ ಬರೆ ಹಾಕಿದ ಘಟನೆ ತಾಲೂಕಿನ ನಾವೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಾಲ್ಕು ವರ್ಷ ಪ್ರಾಯದ ಹೆಣ್ಣು ಮಗು ವಾರದ ಹಿಂದೆ ತುಂಬ ಹಟ ಮಾಡುತ್ತಿದೆ ಎಂದು ತಾಯಿ ಕೈ, ಕಾಲು ಹಾಗೂ ಮುಖಕ್ಕೆ ಸಟ್ಟುಗ ಬಿಸಿ ಮಾಡಿ ಬರೆ ಹಾಕಿದ್ದಳು. ಘಟನೆ ವಾರದ ಹಿಂದೆ ನಡೆದರೂ ಬುಧವಾರ ಬೆಳಕಿಗೆ ಬಂದಿದ್ದು, ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ಸಿಡಿಪಿಒ ರಶ್ಮಿ ನೆಕ್ರಾಜೆ ಮಗುವಿನ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.