ರಾತ್ರೋರಾತ್ರಿ ಮಗನನ್ನು ಬಿಟ್ಟು ಹೋದ ತಾಯಿ! ಕೇಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸರು

crime
Published on

ಮೈಸೂರು: ನಗರದ ಲಾಡ್ಜ್‌ನಲ್ಲಿ ಮಗನನ್ನು ಒಂಟಿಯಾಗಿ ಬಿಟ್ಟು ಮಧ್ಯರಾತ್ರಿ ನಾಪತ್ತೆಯಾಗಿದ್ದ ತಾಯಿಯನ್ನು ಲಷ್ಕರ್ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ.


ತುಮಕೂರು ಮೂಲದ ಗೃಹಿಣಿಯೊಬ್ಬಳು ತನ್ನ ಮಗನನ್ನು ಲಾಡ್ಜ್ ನಲ್ಲಿ ಬಿಟ್ಟು ಹೋಗಿದ್ದ ತಾಯಿ. ಎರಡು ದಿನಗಳ ಹಿಂದೆ ಈಕೆ ತನ್ನ ಮಗ(10 ವರ್ಷ)ನ ಜತೆಗೆ ಮೈಸೂರಿಗೆ ಬಂದು ಹೋಟೆಲ್’ವೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಮಂಗಳವಾರ ಬೆಳಗ್ಗೆ ಚೆಕ್ ಔಟ್ ಇದ್ದ ಕಾರಣ ಹೋಟೆಲ್ ಸಿಬ್ಬಂದಿ ಕೊಠಡಿಗೆ ಬಂದಾಗ ಒಬ್ಬನೇ ಇರುವುದು ಗೊತ್ತಾಗಿದೆ.


ಲಾಡ್ಜ್ ನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಗೃಹಿಣಿ ಬೆಳಗ್ಗೆ 3 ಗಂಟೆಯಲ್ಲಿ ಸೆಲ್ಲಾರ್ ಮೂಲಕ ನಿರ್ಗಮಿಸಿರುವ ದಶ್ಯ ಸೆರೆಯಾಗಿದೆ. ಕೂಡಲೇ ಬಾಲಕನನ್ನು ಲಷ್ಕರ್ ಠಾಣೆಗೆ ಕರೆ ತಂದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಗೃಹಿಣಿ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಮಧ್ಯಾಹ್ನದ ವೇಳೆ ಪತ್ತೆಯಾಗಿದ್ದಾಳೆ.


ಗೃಹಿಣಿ ತನ್ನ ಗಂಡನಿಂದ ವಿಚ್ಛೇದನ ಪಡೆದಿದ್ದು, ಮೈಸೂರಿನ ಯುವಕನೊಬ್ಬನೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾಳೆ ಎನ್ನಲಾಗಿದೆ. ಯುವಕನ ಮನೆಗೆ ತೆರಳಿ ಈಕೆ ರಂಪಾಟ ವಾಡಿದ್ದಾಳೆಂದು ಹೇಳಲಾಗಿದೆ. ನಂತರ ಗೃಹಿಣಿಯ ಪಾಲಕರಿಗೆ ಪೊಲೀಸರು ವಿಚಾರ ಮುಟ್ಟಿಸಿದ್ದಾರೆ. ಬಾಲಕನನ್ನು ಪೊಲೀಸರು ಬಾಲಮಂದಿರ ವಶಕ್ಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net