ಸಂಜೆ ಬಜ್ಜಿ ತಿಂದ ಅಮ್ಮ-ಮಗ ತಡರಾತ್ರಿ ಸಾವು!

death
Published on

ಬೆಳಗಾವಿ: ಹೊಲದಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದ ಅಮ್ಮ-ಮಗ ತಡರಾತ್ರಿ ದುರಂತ ಅಂತ್ಯಕಂಡಿದ್ದಾರೆ. ಅದೂ ಬಜ್ಜಿ ತಿಂದ ಬಳಿಕ!

ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಪಾರ್ವತಿ ಮಳಗಳಿ(53) ಮತ್ತು ಇವರ ಮಗ ಸೋಮನಿಂಗಪ್ಪ ಮಳಗಲಿ(28) ಮೃತರು.

ಅಮ್ಮ-ಮಗ ಇಬ್ಬರೂ ಭಾನುವಾರ ಹೊಲದಲ್ಲಿ ಕೆಲಸ ಮಾಡಲು ಹೋಗಿದ್ದರು. ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್​ ಆಗಿದ್ದರು. ಮನೆಯಲ್ಲಿ ಬಜ್ಜಿ ಸೇವಿಸಿದ್ದರು. ಕೆಲವೇ ಕ್ಷಣದಲ್ಲಿ ಇಬ್ಬರೂ ಅಸ್ವಸ್ಥರಾಗಿದ್ದು, ವಾಂತಿ ಮಾಡಿಕೊಂಡಿದ್ದರು. ಕೂಲಡೇ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅಂದು ತಡರಾತ್ರಿ ಕೊನೆಯುಸಿರೆಳೆದರು.

ಸೋಮವಾರ ತಾಯಿ-ಮಗನ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಅಂತ್ಯಕ್ರಿಯೆ ನೆರವೇರಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವರದಿ ಬಂದ ಬಳಿಕ ವಿಷಾಹಾರ ಸೇವನೆಯಿಂದ ಸಾವಾಗಿದೆಯೋ ಅಥವಾ ಬೇರೆ ಯಾವ ಕಾರಣ ಎಂಬುದು ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net