ಮೂರು ಗಂಡುಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

Baby (1)
Published on

ಚಿತ್ರದುರ್ಗ: ನಿನ್ನೆಯಷ್ಟೇ ಶಿವಮೊಗ್ಗದಲ್ಲಿ ಮಹಿಳೆಯೊಬ್ಬಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಳು. ಇಂದೂ ಕೂಡ ಇಂತಹದ್ದೇ ಘಟನೆ ಮರುಕಳಿಸಿದೆ.

ಚಿತ್ರದುರ್ಗ ನಗರದಪತಂಜಲಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ಮೂರು ಗಂಡು ಶಿಶುಗಳಿಗೆ ತಾಯಿಯೊಬ್ಬಳು ಜನ್ಮ ನೀಡಿದ್ದಾಳೆ.

ಚಳ್ಳಕೆರೆ ತಾಲೂಕು ದೇವರಹಳ್ಳಿ ಕೆ.ಸುಮಯಾ ಹುಸೇನ್‌ಪೀರ್ ಅವರು ಮೂವರು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಮಕ್ಕಳು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯೆ ಡಾ.ತೋಯಾಜಾಕ್ಷಿ ಬಾಯಿ ತಿಳಿಸಿದ್ದಾರೆ.

ಸೋಮವಾರವಷ್ಟೇ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಮಹಿಳೆಯು ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಳು. ಭದ್ರಾವತಿ ತಾಲೂಕಿನ ಕಡಸ ಗ್ರಾಮದ ಆರೀಫ್ ಅವರ ಪತ್ನಿ ಅಲ್ಮಾ ಬಾನು 4 ಮಕ್ಕಳಿಗೆ ಜನ್ಮ ನೀಡಿದ ತಾಯಿ. ಸೋಮವಾರ ಬೆಳಗ್ಗೆ ಅಲ್ಮಾಗೆ ಹೆರಿಗೆಯಾಗಿದ್ದು, 2 ಗಂಡು ಮತ್ತು 2 ಹೆಣ್ಣು ಮಗು ಜನಿಸಿತ್ತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net