

ಬಳ್ಳಾರಿ: ಮನೆಯ ಮುಂಭಾಗದಲ್ಲಿರುವ ವಾಟರ್ ಟ್ಯಾಂಕಿನಲ್ಲಿ ತನ್ನ ಎರಡು ಮಕ್ಕಳನ್ನೂ ಮುಳುಗಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ದುರಂತ ಬಳ್ಳಾರಿಯ ಇಂದಿರಾ ನಗರದಲ್ಲಿ ಸಂಭವಿಸಿದೆ.
ಇಂದಿರಾ ನಗರ ನಿವಾಸಿ ಸಿದ್ದಪ್ಪ ಎಂಬುವರ ಪತ್ನಿ ಸುನೀತಾ (25), ಮಕ್ಕಳಾದ ಯಶ್ವಂತ(4)ಮತ್ತು ಸಾನ್ವಿ(3) ಮೃತ ದುರ್ದೈವಿಗಳು.
ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಆದರೆ, ಕೌಟುಂಬಿಕ ಕಲಹದಿಂದಾಗಿ ಸತ್ತಿದ್ದಾರೆ ಎನ್ನಲಾಗಿದೆ. ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.