ಸರ್ಕಾರಿ ಶಾಲೆಯಲ್ಲಿ ‘ಅಮೃತ ಭೋಜನ’

26NRL
ನರೇಗಲ್ಲನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಮೃತ ಭೋಜನ ಸವಿಯುತ್ತಿರುವುದು.
Published on

ನರೇಗಲ್ಲ: ಪಟ್ಟಣದ ಬಸ್ ನಿಲ್ದಾಣದ ಎದುರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶ್ರಾವಣಮಾಸದಲ್ಲಿ ನಿತ್ಯದ ಬಿಸಿಯೂಟದೊಂದಿಗೆ ಸಿಹಿ ನೀಡಲಾಗುತ್ತಿದೆ. ಅಕ್ಷರ ದಾಸೋಹ ಯೋಜನೆ ಅಡಿ ಮಧ್ಯಾಹ್ನ ನೀಡುವ ಅನ್ನ-ಸಾಂಬಾರ್ ಜತೆಗೆ ಕಳೆದ 2 ವರ್ಷದಿಂದ ಶಿಕ್ಷಕರು, ದಾನಿಗಳಿಂದ ನೆರವಿನಿಂದ ಸಿಹಿ ತಿನಿಸು ನೀಡಲಾಗುತ್ತಿದೆ. ಗೋಧಿ ಹುಗ್ಗಿ, ಶೇಂಗಾ ಹೋಳಿಗೆ, ಶೇಂಗಾ ಉಂಡಿ, ಪಾಯಸ, ಮೈಸೂರು ಪಾಕ್, ಜಿಲೇಬಿಯನ್ನು ಮಕ್ಕಳು ಸವಿಯುತ್ತಿದ್ದಾರೆ. ಈ ಸಿಹಿಯೂಟಕ್ಕೆ ‘ಅಮೃತ ಭೋಜನ’ ಎಂದು ಹೆಸರು ಇಡಲಾಗಿದೆ. ಶ್ರಾವಣಮಾಸದ ಒಂದು ತಿಂಗಳು ಪ್ರತಿದಿನ ಒಬ್ಬರು ದಾನಿಗಳು ಸಿಹಿಯೂಟದ ಖರ್ಚು ವಹಿಸಿಕೊಳ್ಳುತ್ತಾರೆ.

‘ಪಟ್ಟಣದ ಮುಖಂಡರು ಶಾಲೆಗೆ ಬಂದು ತಮ್ಮ ಹೆಸರು ಬರೆಯಿಸಿ ಹೋಗಿದ್ದಾರೆ. ಇದರಿಂದಾಗಿ ಶ್ರಾವಣಮಾಸದ ದಿನವೆಲ್ಲ ದಾನಿಗಳಿಂದ ಸಿಹಿ ಊಟು ಸಿಗುವಂತಾಗಿದೆ. ಇನ್ನು ಅನೇಕರು ಬಂದು ಸಿಹಿಯೂಟದ ಸೇವಾರ್ಥ ಮಾಡಿಸುವುದಾಗಿ ಕೇಳಿದ್ದಾರೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ, ಮುಖ್ಯ ಶಿಕ್ಷಕ ಬಿ.ಬಿ. ಕುರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net