ಸಮಾಜಮುಖಿ ಕೆಲಸದಿಂದ ಮಾದರಿ ಸಂಸ್ಥೆ ಸಾಧ್ಯ

Kin_Bhajana Mandira
Published on

ಕಿನ್ನಿಗೋಳಿ: ಸಂ-ಸಂಸ್ಥೆಗಳು ಸವಾಜಮುಖಿಯಾಗಿ ಕೆಲಸ ನಿರ್ವಹಿಸಿದರೆ ವಾದರಿ ಸಂಸ್ಥೆಯಾಗಿ ಬೆಳೆಯಲು ಸಾಧ್ಯ ಎಂದು ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.

ಕಿನ್ನಿಗೋಳಿ ಸಮೀಪ ಗೋಳಿಜೋರದ ಶಶೀಂದ್ರ ರಂಗವೇದಿಕೆಯಲ್ಲಿ ಭಾನುವಾರ ನಡೆದ ಶ್ರೀರಾಮ ಯುವಕ ವೃಂದದ 39ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ, ಉದ್ಯಮಿ ಸಂತೋಷ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಾಧಕಿ ಶ್ರೇಯಾ ಕುಜಿಂಗಿರಿ ಅವರನ್ನು ಸನ್ಮಾನಿಸಲಾಯಿತು.

ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕಾಂಗ್ರೆಸ್ ಮುಖಂಡ ಮಿಥುನ್ ರೈ, ಎಪಿಎಂಸಿ ವಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಬೆಂಗಳೂರು ಉದ್ಯಮಿ ವೆಂಕಟೇಶ ಶೆಟ್ಟಿ, ಮೋಹಿನಿ ಕಲಾ ಸಂಪದದ ಗಂಗಾಧರ ಡಿ. ಶೆಟ್ಟಿಗಾರ್, ಬರ್ಕೆ ಮನೆ ಜಗನ್ನಾಥ ಸುವರ್ಣ, ಸಮಾಜ ಸೇವಕಿ ಪದ್ಮಿನಿ ವಸಂತ್, ಗೋಳಿಜೋರ ಹರಿಹರ ಶ್ರೀ ರಾಮಭಜನಾ ಮಂಡಳಿ ಅಧ್ಯಕ್ಷ ರು ಗೋಳಿಜೋರ, ಅಂಗನವಾಡಿ ಶಿಕ್ಷಕಿ ಜೂಲಿಯಾನಾ ಬರ್ಬೊಜಾ, ಸಂಸ್ಥೆ ಗೌರವ ಸಲಹೆಗಾರ ಸುಧಾಕರ ಶೆಟ್ಟಿ, ಕಾರ್ಯದರ್ಶಿ ನವನೀತ್ ಗೋಳಿಜೋರ ಮತ್ತಿತತರು ಉಪಸ್ಥಿತರಿದ್ದರು.

ಶಿಕ್ಷಕ ಉಮೇಶ್ ನೀಲಾವರ ಅಭಿನಂದನಾ ಭಾಷಣ ಮಾಡಿದರು. ಮನೋಜ್ ಗೋಳಿಜೋರ ಸ್ವಾಗತಿಸಿದರು. ಸಂಸ್ಥೆ ಅಧ್ಯಕ್ಷ ಹರಿಕೃಷ್ಣ ಗೋಳಿಜೋರ ವಂದಿಸಿದರು. ಸಂತೋಷ್ ನಂಬಿಯಾರ್ ಪಡುಬಿದ್ರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net