ನಾಡಿಗೆ ಭಾವೈಕ್ಯತೆ ಮಾದರಿ

h7=murusavirmath
Published on

ಹುಬ್ಬಳ್ಳಿ: ಹಿಂದು-ಮುಸ್ಲಿಮರು ಕೂಡಿಕೊಂಡು ಬಕ್ರೀದ್ ಹಬ್ಬ ಆಚರಣೆ ಮಾಡುವುದು ಪರಂಪರೆಯಾಗಿ ನಡೆದುಕೊಂಡು ಬಂದಿದೆ. ಇದು ನಾಡಿಗೆ ಮಾದರಿಯಾಗಿದೆ. ಏಕತೆ, ಪ್ರೀತ, ಮಾನವೀಯತೆ ಇಮ್ಮಡಿಯಾಗಿದೆ ಎಂದು ಮೂರುಸಾವಿರಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಚನ್ನಮ್ಮ ಮೈದಾನದಲ್ಲಿ (ಈದ್ಗಾ) ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಮೂರುಸಾವಿರ ಮಠಕ್ಕೆ ತೆರಳಿ ಪೂಜ್ಯರ ಆಶೀರ್ವಾದ ಪಡೆದರು.

ಪ್ರಮುಖರಾದ ಅರವಿಂದ ಕುಬಸದ, ಅಮರೇಶ ಹಿಪ್ಪರಗಿ, ಚನ್ನಬಸಪ್ಪ ಧಾರವಾಡಶೆಟ್ಟರ, ಸದಾನಂದ ಡಂಗನವರ, ಮಲ್ಲಿಕಾರ್ಜುನ ಕಳಸರಾಯ, ಎ.ಎಂ. ಹಿಂಡಸಗೇರಿ, ಅಲ್ತಾಫ ಹಳ್ಳೂರ, ಯುಸೂಫ್ ಸವಣೂರ, ಅಶ್ಫಾಕ್,ಶಿರಾಜ ಅಹ್ಮದ ಕುಡಚಿವಾಲೆ, ರಾಜೇಸಾಬ್ ಸಿಕಂದರ, ನವೀನ ಕುದರಿ, ಎ.ಬಿ. ಪಾಟೀಲ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net