ಸಂಸ್ಕಾರಯುತ ಜೀವನ ಶೈಲಿ ಮಾದರಿ

saligrama
Published on

ಕೋಟ: ಭರತಖಂಡದಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಅನನ್ಯ. ಅವರ ಜೀವನ ಕ್ರಮ ಬದುಕುವ ದಾರಿ ಶ್ರೇಷ್ಠನೀಯ. ಸಮುದಾಯದ ಪರಂಪರೆ ಸಂಸ್ಕಾರಯುತ ಜೀವನ ಶೈಲಿ ಎಲ್ಲ ಸಮಾಜಕ್ಕೂ ಮಾದರಿ ಹಾಗೂ ದಾರಿದೀಪ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಾಲಿಗ್ರಾಮ ಶ್ರೀಗರು ನರಸಿಂಹ ದೇಗುಲ ಬಯಲು ರಂಗಮಂದಿರಲ್ಲಿ ಬುಧವಾರ ಸಾಲಿಗ್ರಾಮ ಹಬ್ಬ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ವಿಶ್ವವಿದ್ಯಾಲಯ ನಿವೃತ್ತ ಉಪ ಕುಲಪತಿ ಡಾ.ಎಂ.ಡಿ.ವೆಂಕಟೇಶ್ ವಿ.ಎಸ್.ಎಂ., ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಅಧ್ಯಕ್ಷ ಎಚ್.ಸತೀಶ್ ಹಂದೆ, ದೇಗುಲ ಆಡಳಿತ ಮಂಡಳಿ ಕರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ ಮತ್ತಿತರು ಉಪಸ್ಥಿತರಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ಗಣೇಶ ಮೂರ್ತಿ ನಾವಡ ಸ್ವಾಗತಿಸಿ, ಶಿಕ್ಷಕಿ ನಾಗರತ್ನ ಹೇರಳೆ ಕಾರ್ಯಕ್ರಮ ನಿರೂಪಿಸಿದರು. ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಮಾಜಿ ಉಪಾಧ್ಯಕ್ಷ ಕೆ.ತಾರಾನಾಥ್ ಹೊಳ್ಳ, ಮಹಿಳಾ ವೇದಿಕೆ ಅಧ್ಯಕ್ಷ ಯಶೋದಾ ಹೊಳ್ಳ ಸನ್ಮಾನಿತರ ಪತ್ರ ವಾಚಿಸಿದರು. ಮಂಡಳಿ ಸದಸ್ಯ ಎ.ವಿ.ಶ್ರೀಧರ ಕಾರಂತ್ ವಂದಿಸಿದರು.

ಸಧಾಕರಿಗೆ ಗೌರವಾರ್ಪಣೆ

ಸಾಧಕರಾದ ಡಾ.ಚಿತ್ರಪಾಡಿ ಆನಂದರಾಮ ಉಪಾಧ್ಯ ಬೆಂಗಳೂರು, ಕೃಷ್ಣವೇಣಿ ತುಂಗ, ವಾಸುದೇವ ಹೊಳ್ಳ ಮಧೂರು, ಕೃಷ್ಣ ಎಂ.ಜೋಗಭಟ್ಟ, ಅಡ್ಡೂರು ವೆಂಕಟರಾವ್, ಕಿರಣ್ ಮಯ್ಯ ಎಂ.ಎಸ್.ಅಮೆರಿಕ, ಕ್ಯಾಪ್ಟನ್ ನೇಹ ಜೈರಾಮ್ ಐತಾಳ್, ಬಾಬುರಾಯ್ ಆಚಾರ್ಯ, ಕೃಷ್ಣದೇವಾಡಿಗ ಐರೋಡಿ, ಮಾಸ್ಟರ್ ಧೀರಜ್ ಐತಾಳ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net