

ಮಂಡ್ಯ: ಶಾಸಕ ಸಿ.ಎಸ್.ಪುಟ್ಟರಾಜು ಅವರ ಮನೆ ಮೇಲೆ ದುಷ್ಕಮಿರ್ಗಳು ಕಲ್ಲು ತೂರಾಟ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿರುವ ಶಾಸಕರ ಮನೆ ಮೇಲೆ ಕಲ್ಲು ತೂರಾಟ ಮಾಡಿರುವ ಕಿಡಿಗೇಡಿಗಳು, ರಸ್ತೆಗಳಲ್ಲಿ ನಿಲ್ಲಿಸಿದ್ದ 8 ಕಾರುಗಳ ಗಾಜು ಹೊಡೆದು ಅಟ್ಟಹಾಸ ಮೆರೆದಿದ್ದಾರೆ. ಖಾಸಗಿ ಬಸ್ಸು, ಶೋ ರೂಂ ಮೇಲೂ ಕಲ್ಲು ತೂರಿದ್ದಾರೆ. ಶಾಸಕ ಪುಟ್ಟರಾಜು ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಹಾಕಲಾಗಿದ್ದ ಫ್ಲೆಕ್ಸ್ ಹರಿದು ವಿಕೃತಿ ಮೆರದಿದ್ದಾರೆ. ಶಾಸಕರ ಮನೆಯ ಕಿಟಕಿ ಗಾಜು ಪುಡಿಪುಡಿಯಾವಗಿವೆ.
ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಪಾಂಡವಪುರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.