

ರಾಯಲ್ಪಾಡು: ರಾಯಲ್ಪಾಡು ಹೋಬಳಿಯ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ನೈರ್ಮಲ್ಯ ಕಾಪಾಡುವುದರಲ್ಲಿ ಸ್ಥಳಿಯ ಅಧಿಕಾರಿಗಳ ರ್ನಿಲಕ್ಷ$್ಯವಹಿಸಿದ್ದು, ಸರ್ಕಾರದಿಂದ ಸ್ವಚ್ಛತೆ ಕಾಪಾಡಲು ಕೋಟ್ಯಾಂತರ ರೂಪಾಯಿ ಬಂದರೂ ಸಹ ಅಭಿವೃದ್ಧಿ ಮರೀಚಿಕೆಯಾಗಿದೆ.
ಗ್ರಾಮದ ಹೊರವಲಯದ ಬಿ.ಕೋತ್ತಕೋಟ ಮುಖ್ಯ ರಸ್ತೆಯ ಬೆಸ್ಕಾಂ ಕಚೇರಿ ಮುಂಭಾಗ ಕಸದ ರಾಶಿಗಳು ತುಂಬಿದ್ದು, ದಾರಿಹೋಕರಿಗೆ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿಯಲ್ಲಿ ಆಳವಲ್ಲದ ಗುಂಡಿಗಳಲ್ಲಿ ಆಹಾರ ಪದಾರ್ಥಗಳು, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳು ಎಸೆದಿರುವುದರಿಂದ ಶ್ವಾನಗಳ ಉಪಟಳ ಹೆಚ್ಚಾಗಿದೆ. ಮಳೆ ಬಂದರೆ ಈ ತ್ಯಾಜ್ಯಗಳು ರಸ್ತೆಯ ಮಧ್ಯೆಕ್ಕೆ ಬಂದು ನಿಲ್ಲುತ್ತವೆ, ಆಗ ನೀರಿನೊಂದಿಗೆ ಸೇರಿ ಮತ್ತಷ್ಟು ಕೆಟ್ಟ ವಾಸನೆ ಉಂಟಾಗಿ ಡೆಂ, ಇತರೆ ವೈರಲ್ ಜ್ವರ ಸೇರಿ ಸೋಂಕು ಹರಡುವ ಆತಂಕವನ್ನುಂಟುಮಾಡುತ್ತಿದೆ.
ಶಾಲೆ&ಕಾಲೇಜು ಮಕ್ಕಳು ದಿನವೂ ಇದೇ ರಸ್ತೆಯಲ್ಲಿ ಸಂಚರಿಸುವ ಕಾರಣ, ಪಾಲಕರಲ್ಲಿ ರೋಗ ಭೀತಿಯ ಆತಂಕ ಉಂಟಾಗಿದೆ. ಕೆಲವು ಬಾರಿ ಏನೂ ತಿಳಿಯದ ಮಕ್ಕಳು ಕಸದ ಬಳಿ ಆಟವಾಡುತ್ತಾರೆ. ಕಸದ ರಾಶಿ ಬಳಿ ಇದ್ದ ಶ್ವಾನಗಳು ಮಕ್ಕಳ ಮೇಲೆ ಎರಗುತ್ತವೆಯೋ ಎಂಬ ಆತಂಕ ಮನೆ ಮಾಡಿದೆ. ಇದರಿಂದ ಅವರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಥಳಿಯರು ಹಲವು ಬಾರಿ ಪಂಚಾಯಿತಿಗೆ ದೂರು ನೀಡಿದರೂ ನಿರ್ವಹಣೆ ಕಂಡುಬಂದಿಲ್ಲ. ನಾಳೆ ತೆಗೆಸ್ತೀವಿ ಅಂತಾರೆ, ಆದರೆ ಕಾರ್ಯರೂಪಕ್ಕೆ ಇಳಿಯುವುದೇ ಇಲ್ಲ, ವಾಸ್ತವಿಕತೆ ಗಂಭೀರ ರ್ನಿಲಕದಕ್ಷ್ಯ ತೋರಿಸುತ್ತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣದ ಕ್ರಮವಿಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ತಕ್ಷಣದ ಕಸ ತೆರವು, ನಿರಂತರ ಸ್ವಚ್ಛತಾ ಕ್ರಮಗಳನ್ನು ಅನುಷ್ಠಾನಗೊಳಿಸುವ ವ್ಯವಸ್ಥೆ, ಸ್ಥಳಿಯ ಆಡಳಿತವು ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.