ಫರ್ನೀಚರ್​ ಮೇಳಕ್ಕೆ ಕುಟುಂಬ ಸಮೇತ ಆಗಮಿಸಿದ ಸಚಿವ ಬಿ.ಸಿ.ಪಾಟೀಲ್

New Project(12)
Published on

ಬೆಂಗಳೂರು: ಅರಮನೆ ಮೈದಾನದ ಗಾಯತ್ರಿ ವಿಹಾರ್​ನಲ್ಲಿ ನಡೆಯುತ್ತಿರುವ ‘ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸ ಉಪಕರಣಗಳ ಮೇಳ’ಕ್ಕೆ ಸೋಮವಾರ ಸಚಿವ ಬಿ.ಸಿ ಪಾಟೀಲ್ ಅವರು ಕುಟುಂಬ ಸಮೇತ ಆಗಮಿಸಿದರು.

ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ಮಾಧ್ಯಮ ಸಹಯೋಗ ಹಾಗೂ ಯುನಿಲೆಟ್​ ಸಹಭಾಗಿತ್ವದಲ್ಲಿ ಈ ಮೇಳ ನಡೆಯುತ್ತಿದ್ದು, ಕೊನೇ ದಿನವಾದ ಸೋಮವಾರ ಸಚಿವರು ಎಕ್ಸ್​ಪೋ ಆಗಮಿಸಿ ಸೋಫಾ, ಫರ್ನೀಚರ್ಸ್, ಇಂಟೀರಿಯಲ್ ಡಿಸೈನ್ ವೀಕ್ಷಿಸಿದರು. ಅಪಾರ ಸಂಖ್ಯೆಯಲ್ಲಿ ಗ್ರಾಹಕರೂ ಕುಟುಂಬಸಮೇತ ಆಗಮಿಸಿ ಫರ್ನೀಚರ್​ ಮೇಳದಲ್ಲಿ ದೇಸಿ ಉದ್ಯಮಗಳ ತಾಕತ್ತನ್ನು ಕಣ್ತುಂಬಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net