ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿನಿ ಅನ್ವೇಷಣಾ

Bel_Exploration
Published on

ಬೆಳ್ತಂಗಡಿ: ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು ಮತ್ತು ಅಗಸ್ತ್ಯ ಬೆಂಗಳೂರು ಅಂತಾರಾಷ್ಟ್ರೀಯ ಫೌಂಡೇಷನ್ ಸಹಯೋಗದಲ್ಲಿ ಮಿನಿ ಅನ್ವೇಷಣಾ ಕಾರ್ಯಕ್ರಮ, ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.

180 ವಿದ್ಯಾರ್ಥಿಗಳು 45 ತಂಡಗಳಾಗಿ ಭಾಗವಹಿಸಿ, ವಿವಿಧ ಸಮಸ್ಯೆಗಳಿಗೆ ತಂತ್ರಜ್ಞಾನದ ಅಳವಡಿಕೆ ಮೂಲಕ ಪರಿಹಾರ ಕಂಡುಕೊಳ್ಳುವಲ್ಲಿ ತಮ್ಮ ನವೀನ ಕಲ್ಪನೆಗಳನ್ನು ಪ್ರಸ್ತುತಪಡಿಸಿದರು.

ಪ್ರಾಂಶುಪಾಲ ಡಾ.ಅಶೋಕ್ ಕುಮಾರ್, ಇಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಡಾ.ಮಧುಸೂದನ, ನೇಮಕಾತಿ ಅಧಿಕಾರಿ ಡಾ. ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.

ಅಗಸ್ತ್ಯ ಫೌಂಡೇಷನ್‌ನ ಭಾಸ್ಕರ್, ಡಾ.ಸಂದೀಪ್, ಮೈಟ್ ಮೂಡುಬಿದಿರೆಯ ಡಾ.ಶಿವರಾಮ್, ಕಾರ್ಯಕ್ರಮ ಸಂಯೋಜಕ ಡಾ. ಮೋಹನ್ ನಾಯ್ಕ ತೀರ್ಪುಗಾರರಾಗಿ ಸಹಕರಿಸಿದರು. ವಿಜೇತ ತಂಡಗಳಿಗೆ ಪ್ರಾಂಶುಪಾಲರು ನಗದು ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net