‘ಎ ಮಿಡ್ ಸಮ್ಮರ್ ನೈಟ್ ಡ್ರೀಮ್’ ನಾಟಕ ಪ್ರದರ್ಶನ

Drama-games
Published on


ಮೈಸೂರು: ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಂಭ್ರಮದ ಅಂಗವಾಗಿ ಸಂಚಲನ ಮೈಸೂರು ಸಂಸ್ಥೆ ಸಹಯೋಗದಲ್ಲಿ ‘ಎ ಮಿಡ್ ಸಮ್ಮರ್ ನೈಟ್ ಡ್ರೀಮ್’ ನಾಟಕ ಪ್ರದರ್ಶನವನ್ನು ನ.23ರಂದು ಸಂಜೆ 6.30ಕ್ಕೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.


ಷೇಕ್ಸ್‌ಪಿಯರ್ ಅವರ ಈ ನಾಟಕವನ್ನು ಕೆ.ಎಸ್.ನಿಸಾರ್ ಅಹಮದ್ ಅನುವಾದಿಸಿದ್ದಾರೆ. ಜೀವನ್ ಕುಮಾರ್ ಬಿ.ಹೆಗ್ಗೋಡು ನಿರ್ದೇಶನದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಹೃದಯರಂಗ ರಂಗತಂಡ ನಾಟಕವನ್ನು ಪ್ರಸ್ತುತಪಡಿಸಲಿದೆ. ದೀಪಕ್ ಮೈಸೂರು ಅವರು ವಿನ್ಯಾಸ ಮತ್ತು ಪರಿಕಲ್ಪನೆ ಜವಾಬ್ದಾರಿ ಹೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net