

ತುರುವೇಕೆರೆ: ಗುಡ್ಡೇನಹಳ್ಳಿ ಮುರಾರ್ಜಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಯನ್ನು ಅಲ್ಲಿನ ರೋಗಿಗಳೇ ಬಯಲು ಮಾಡುತ್ತಿದ್ದಾರೆ.
ಕರೊನಾ ಬಂದವರನ್ನು ಸಾರ್ವಜನಿಕ ಆಸ್ಪತ್ರೆ ಹಾಗೂ ಗುಡ್ಡೇನಹಳ್ಳಿ ಬಳಿಯ ಮುರಾರ್ಜಿ ವಸತಿ ಶಾಲೆಯ ಚಿಕಿತ್ಸಾ ಕೇಂದ್ರಕ್ಕೆ ದಾಖಲು ಮಾಡಲಾಗುತ್ತಿದ್ದು, ಸುಮಾರು 40 ರಿಂದ 50 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಆಡಳಿತ ರೋಗಿಗಳಿಗೆ ಮಂಚ, ಹಾಸಿಗೆ, ಬೆಡ್‌ಶೀಟ್ ಸೇರಿ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಿದೆ ಎಂದು ಹೇಳುತ್ತಿದ್ದರೂ, ರೋಗಿಗಳು ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
‘ಸೋಮವಾರದಿಂದ ಗುಡ್ಡೇನಹಳ್ಳಿ ಬಳಿ ಮುರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ನಮಗೆ ನೀಡುವ ಊಟ ಉತ್ತಮವಾಗಿಲ್ಲ, ಉಪ್ಪು ಜಾಸ್ತಿಯಾಗಿರುತ್ತದೆ. ಅನ್ನ ನೀಡಿ ತರಕಾರಿ, ಬೇಳೆ ಇಲ್ಲದ ಸಾಂಬಾರ್ ನೀಡುತ್ತಾರೆ. ಮುದ್ದೆ ನೀಡುತ್ತಾರೆ, ಚಪಾತಿ, ಹಪ್ಪಳ, ಉಪ್ಪಿನಕಾಯಿ ನೀಡಲ್ಲ, ನ್ಯೂಸ್ ಪೇಪರ್, ಟಿವಿ ಇಲ್ಲ, ಓದಲು ಪುಸ್ತಕ ನೀಡಲ್ಲ, ತಹಸೀಲ್ದಾರ್‌ಗೆ ದೂರು ನೀಡಿದ್ದು, ಗುರುವಾರ ಚಪಾತಿ ನೀಡಿದ್ದಾರೆ ಎಂದು ರೋಗಿಯೊಬ್ಬರು ಆರೋಪಿಸಿದ್ದಾರೆ.
ಮಾರ್ಚ್ ನಿಂದ ಗುಡ್ಡೇನಹಳ್ಳಿ ಕೋವಿಡ್ ಸೆಂಟರ್‌ನಲ್ಲಿ ಪಾಸಿಟಿವ್ ಬಂದವರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ಗುಣಮಟ್ಟದ ಊಟ ನೀಡಲಾಗುತ್ತಿದೆ. ಅದೇ ಊಟವನ್ನು ನಾನೂ ಸೇರಿ ಅಧಿಕಾರಿಗಳು ಸೇವಿಸುತ್ತಿದ್ದೇವೆ. ಕೆಲವರು ಸುಮ್ಮನೆ ಆರೋಪಿಸಿದ್ದಾರೆ. ನಯೀಂಉನ್ನಿಸಾ ತಹಸೀಲ್ದಾರ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಎಲ್ಲ ರೋಗಿಗಳಿಗೆ ಮಾತ್ರೆ ನೀಡಲಾಗುತ್ತದೆ. ಸ್ಟ್ಾನರ್ಸ್‌ಗಳಿಂದ ಪ್ರತಿದಿನ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. 550 ಜನರು ಗುಣಮುಖರಾಗಿ ತೆರಳಿದ್ದಾರೆ. ಎಲ್ಲರಿಗೂ ಉತ್ತಮ ಸೇವೆ ನೀಡಲಾಗುತ್ತಿದೆ. ಡಾ.ಸುಪ್ರಿಯಾ ತುರುವೇಕೆರೆ ತಾಲೂಕು ವೈದ್ಯಾಧಿಕಾರಿ