ಮಾನಸಿಕ ಅಸ್ವಸ್ಥ ಮಹಿಳೆ ಅನಾಥಾಶ್ರಮಕ್ಕೆ ಸೇರ್ಪಡೆ

Published on

ಸೋಮವಾರಪೇಟೆ: ನಗರೂರು ಗ್ರಾಮ ಮತ್ತು ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರು ಮೈಸೂರಿನ ಅನಾಥಾಶ್ರಮಕ್ಕೆ ಆಕೆಯನ್ನು ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಮಾನಸಿಕ ಅಸ್ವಸ್ಥ ಮಹಿಳೆ ರಸ್ತೆಬದಿಯಲ್ಲಿ ವಿವಸ್ತ್ರವಾಗಿ ಸುತ್ತುವುದು, ವಾಹನಗಳಿಗೆ ಕಲ್ಲು ಬೀಸುವುದು ಇನ್ನಿತರ ತೊಂದರೆಗಳನ್ನು ಸಾರ್ವಜನಿಕರಿಗೆ ಕೊಡುತ್ತಿದ್ದಳು. ಈ ಬಗ್ಗೆ ನಿವೃತ್ತ ಪೊಲೀಸ್ ಸಿಬ್ಬಂದಿ ಅಂತೋನಿ ಡಿಸೋಜ ಹಾಗೂ ಫ್ರಾನ್ಸಿಸ್ ಅವರು ಬೇಳೂರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅನುಮತಿ ಪಡೆದು, ಅನಾಥಾಶ್ರಮಕ್ಕೆ ಸೇರಿಸಿದ್ದಾರೆ.

ಸೋಮವಾರಪೇಟೆ ಸಮೀಪದ ನಗರೂರು ಗ್ರಾಮದ ರಸ್ತೆಬದಿಯಲ್ಲಿ ಅಡ್ಡಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನು ಕರವೇ ಅಧ್ಯಕ್ಷ ಫ್ರಾನ್ಸಿಸ್ ಅವರು ಮೈಸೂರಿನ ಅನಾಥಾಶ್ರಮಕ್ಕೆ ಬಿಟ್ಟರು. ಅಂತೋಣಿ ಡಿಸೋಜ, ಪಿಡಿಒ ಉಮೇಶ್, ದರ್ಶನ್, ಸಾಗರ್, ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net