

ವಿರಾಜಪೇಟೆ : ವಿರಾಜಪೇಟೆ 16ನೇ ವಿಧಾನಸಭೆಯ 4ನೇ ಅಧಿವೇಶನಕ್ಕೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅಧಿವೇಶನದುದ್ದಕ್ಕೂ ನಿಗದಿತ ಸಮಯಕ್ಕೆ ಹಾಜರಾಗಿ ಶಿಸ್ತು, ಸಮಯ ಪಾಲನೆಯಿಂದ ಸದನದಲ್ಲಿ ಮಾದರಿಯಾಗಿದ್ದಾರೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಭಾಧ್ಯಕ್ಷರ ಕಚೇರಿಯಿಂದ ಗೌರವಾರ್ಥವಾಗಿ ನೀಡಿರುವ ನೆನಪಿನ ಕಾಣಿಕೆಯನ್ನು ಸೋಮವಾರ ಪೊನ್ನಣ್ಣ ಸ್ವೀಕರಿಸಿದರು.
ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಶಾಸಕರ ಆಪ್ತ ಕಾರ್ಯದರ್ಶಿ ಮಹೇಂದ್ರ, ಆಪ್ತ ಸಹಾಯಕ ಆದರ್ಶ್, ಶಾಸಕರ ಖಾಸಗಿ ಮಾಧ್ಯಮ ಸಹಾಯಕ ವಿನಿಲ್ ಸೊಮ್ಮಣ್ಣ, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ಡಾ.ನಿಶ್ಚಲ್ ದಂಬೆಕೊಡಿ, ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಬೋಪಣ್ಣ, ವಿಜಯ್ ಇತರರು ಇದ್ದರು.