ಶೇಷಗಿರಿಯಲ್ಲಿ ಮನಗೆದ್ದ ನಾಟಕೋತ್ಸವ

HNL NATAK
Published on

ಹಾನಗಲ್ಲ: ಬೆಂಗಳೂರಿನ ರಂಗಶಂಕರ ಸಂಸ್ಥೆ ರಾಜ್ಯಾದ್ಯಂತ ಪ್ರತಿ ವರ್ಷ ನಾಟಕ ಪ್ರದರ್ಶನ ಮಾಡುವಂತೆ ಈ ಬಾರಿ ತಾಲೂಕಿನ ಶೇಷಗಿರಿಯಲ್ಲಿ ನಾಲ್ಕು ನಾಟಕಗಳನ್ನು ಪ್ರದರ್ಶಿಸಿತು.

ವಿವೇಕ ಶಾನಭಾಗ ರಚಿಸಿದ ಬಹುಮುಖಿ, ಕಾವ್ಯಾ ಕಡಮೆ ಅವರ ರಚನೆಯ ಡೋರ್ ನಂ-8, ರೋಹಿತ್ ಬೈಲಾಡಿ ಅವರ ಇಂಗ್ಲಿಷ್ ಅನುವಾದದ ಬೆತ್ತಲಾಟ, ಹಾಗೂ ಅಭಿಮನ್ಯು ಭೂಪತಿ ಅವರ ರಚನೆಯ ಸುಡುಗಾಡ ಸಂಘ ಪ್ರದರ್ಶನಗೊಂಡವು.

ಸುಂದರ ರಂಗಸಜ್ಜಿಕೆ, ಸಮರ್ಥ ಬೆಳಕು ನಿಯೋಜನೆ, ಉನ್ನತ ಮಟ್ಟದ ಅಭಿನಯ ಶೇಷಗಿರಿಯಂತಹ ಗ್ರಾಮೀಣ ಪ್ರದೇಶದ ನೋಡುಗರನ್ನು ಮನ ಮುಟ್ಟುವಲ್ಲಿ ಯಶಸ್ವಿಯಾದವು. ರಂಗಶಂಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಾಟಕಗಳು ಪ್ರದರ್ಶನಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net